ಇಬ್ಬರು ಅಪರಿಚಿತ ಯುವಕರಿಂದ ನಗದು ದೋಚಿ ಪರಾರಿ

home theft 100 gram gold cash silver gone
ಸಾಂದರ್ಭಿಕ ಚಿತ್ರ
Published on

ಹಾಸನ: ತಾಲ್ಲೂಕಿನ ಬಿ.ಬೈರಾಪುರ ಗ್ರಾಮದ ಮನೆಯೊಂದಕ್ಕೆ ನುಗ್ಗಿರುವ ಇಬ್ಬರು ಅಪರಿಚಿತ ಯುವಕರು ಮಹಿಳೆಯನ್ನು ಹೆದರಿಸಿ 98 ಸಾವಿರ ರೂ. ನಗದು ಹಾಗು ಎರಡು ಮೊಬೈಲ್, ಬೆಳ್ಳಿಯ ಚೈನು ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ನಿವಾಸಿ ಮಾಲಮ್ಮ ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ. ಫೆ. 9 ಶನಿವಾರರಂದು ಮಾಲಮ್ಮ ಕೂಲಿ ಕೆಲಸಕ್ಕೆ ತೆರಳಿದ್ದರು. ಮನೆಯಲ್ಲಿ ಸಿದ್ದಮ್ಮ ಮತ್ತು ಮಗಳು ಸಹನಾ ಎಂಬುವವರು ಇದ್ದಾಗ ಒಳಪ್ರವೇಶಿಸಿರುವ 20 ರಿಂದ 25 ವಯಸ್ಸಿನ ಇಬ್ಬರು ಅಪರಿಚಿತರು ಒಳಭಾಗದಿಂದ ಬಾಗಿಲ ಡೋರ್ ಲಾಕ್ ಮಾಡಿಕೊಂಡು ಇಬ್ಬರನ್ನೂ ಹೆದರಿಸಿ ಬೀರುವಿನಲ್ಲಿಟ್ಟಿದ್ದ ಹಣ, ಬೆಳ್ಳಿಯ ಚೈನು ಹಾಗು ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ದುದ್ದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net