ಇಬ್ಬರಿಗೆ ಚಾಕು ಇರಿತ

Crime Logo
Published on

ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ನಡೆದ ಜಗಳದಲ್ಲಿ ಇಬ್ಬರು ಯುವಕರಿಗೆ ಚಾಕು ಇರಿದ ಘಟನೆ ಸಪ್ತಾಪುರದಲ್ಲಿ ಗುರುವಾರ ಸಂಜೆ ನಡೆದಿದೆ.

ಮದಾರಮಡ್ಡಿ ಮೈದಾನದಲ್ಲಿ ಬೆಳಗ್ಗೆ ಕ್ರಿಕೆಟ್ ಆಡುವಾಗ ಎರಡು ಗುಂಪುಗಳ ನಡುವೆ ಜಗಳ ನಡೆದಿತ್ತು. ಸಂಜೆ ಜಗಳ ಬಗೆಹರಿಸುವ ನೆಪದಲ್ಲಿ ಮತ್ತೆ ಒಂದು ಗುಂಪಿನ ಜನರನ್ನು ಕರೆಯಿಸಿದ್ದಾರೆ. ಆಗ ನಾಗರಾಜ ಹೊಂಗಣ್ಣವರ, ಭರತ ಕರೆಣ್ಣವರ, ವೀರೇಶ ಸೊಟ್ಟನಾಳ, ಆದರ್ಶ ನಾಯಕ, ಸಂಗಮೇಶ ಕಮಾಟಿ, ವಿನಾಯಕ ಕಲಬುರ್ಗಿ ಎಂಬುವವರು ಉದಯ ಕೆಲಗೇರಿ ಹಾಗೂ ನಾಗರಾಜ ಅವರಿಗೆ ಚಾಕು ಇರಿದು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಇಬ್ಬರನ್ನು ಚಿಕಿತ್ಸೆಗಾಗಿ ಕಿಮ್ಸ್​ಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶುಕ್ರವಾರ ಐದು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net