ಇಬ್ಬರು ಕೆರೆಯಲ್ಲಿ ಮುಳುಗಿ ಸಾವು

dead
ಚಿಕ್ಕಿಂಗಳ
Published on

ಕಡೂರು: ಚಿಕ್ಕಿಂಗಳ ಗ್ರಾಮದ ಕೆರೆಯಲ್ಲಿ ಮುಳುಗುತ್ತಿದ್ದ ಬಾಲಕರನ್ನು ಕಾಪಾಡಲು ಹೋದ ವೃದ್ಧ ಸೇರಿದಂತೆ ಬಾಲಕ ಮೃತಪಟ್ಟಿದ್ದಾರೆ.

ಚಿಕ್ಕಿಂಗಳ ಗ್ರಾಮದ ಕೃಷ್ಣನಾಯ್ಕ (65) ಮತ್ತು ಆದರ್ಶ (14) ಮೃತ ದುರ್ದೈವಿಗಳು. ಕೃಷ್ಣನಾಯ್ಕ ಚಿಕ್ಕಿಂಗಳ ಗ್ರಾಮದ ಕೆರೆಯಲ್ಲಿ ಕುರಿಗಳಿಗೆ ನೀರು ಕುಡಿಸಲು ಹೋದಾಗ ಕೆರೆಯ ಗುಂಡಿಯಲ್ಲಿ ಈಜಲು ಹೋದ ಗ್ರಾಮದ ಇಬ್ಬರು ಬಾಲಕರು ಮುಳುಗುತ್ತಿರುವುದನ್ನು ಕಂಡರು. ತಕ್ಷಣ ಓರ್ವ ಬಾಲಕರನ್ನು ದಡಕ್ಕೆ ತಂದು ಬಿಟ್ಟು ಬಳಿಕ ಮತ್ತೋರ್ವ ಬಾಲಕ ಆದರ್ಶನನ್ನು ಹೊರತರುವ ಸಂದರ್ಭದಲ್ಲಿ ಗುಂಡಿಯಲ್ಲಿ ಇಬ್ಬರೂ ಮುಳುಗಿ ಮೃತಪಟ್ಟರು. ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net