ಇಪಿಎಸ್ ನೌಕರರಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟಿ

10-08-Shiva-1
ಇಪಿಎಸ್ ನೌಕರರಿಗೆ ಪಿಂಚಣಿಯಲ್ಲಿ ಆಗುತ್ತಿರುವ ಅನ್ಯಾಯ ತಡೆಗಟ್ಟುವಂತೆ ಒತ್ತಾಯಿಸಿ ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಇಪಿಎಸ್-95 ಹೋರಾಟ ಸಮಿತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಸಂಘದ ಅಧ್ಯಕ್ಷ ವೀರಭದ್ರಯ್ಯ, ಪದಾಕಾರಿಗಳ ವೀರಭದ್ರಪ್ಪ, ಬಾಲಪ್ಪ, ಶರಣಯ್ಯ, ಭೀಮಸಿಂಗರಾವ್, ಉಮೇಶ, ರುದ್ರಯ್ಯ ಗುಣಾರಿ ಇದ್ದರು.
Published on

ರಾಯಚೂರು: ದೇಶದಲ್ಲಿನ 75 ಲಕ್ಷ ಇಎಪಿಎಸ್ ನೌಕರರಿಗೆ ನಿವೃತ್ತಿ ವೇತನದಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಇಪಿಎಸ್-95 ಹೋರಾಟ ಸಮಿತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಈ ಕುರಿತು ಜನಪ್ರತಿನಿಗಳು ಹಾಗೂ ಸಂಬಂಸಿದ ಅಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬರಲಾಗುತ್ತಿದ್ದರೂ ಯಾವುದೇ ಕ್ರಮವಾಗುತ್ತಿಲ್ಲ ಎಂದು ದೂರಿದರು.
ನೌಕರರ ವೇತನದಿಂದ ನೌಕರರ ಪಾಲಾಗಿ ಪ್ರತಿ ತಿಂಗಳು 417 ರೂ. ದಿಂದ 1,250 ರೂ.ವರೆಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಹಣವನ್ನು ಕಡಿತ ಮಾಡಲಾಗಿದೆ. ಆದರೆ ನಿವೃತ್ತಿಯ ನಂತರದಲ್ಲಿ ನಿವೃತ್ತಿ ವೇತನವಾಗಿ ಕೇವಲ 1,171 ರೂ. ಮಾತ್ರ ನೀಡುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ.
ಬೆಲೆ ಏರಿಕೆ ಹೆಚ್ಚಾಗುತ್ತಿದ್ದು, ಅದಕ್ಕೆ ತಕ್ಕಂತೆ ನಿವೃತ್ತ ನೌಕರರಿಗೆ ಕನಿಷ್ಠ 7,500 ರೂ. ಪಿಂಚಣಿ ನಿಗದಿಪಡಿಸಬೇಕು. ಕೋಶಿಯಾರಿ ಸಮಿತಿ ಶಿಾರಸ್ಸಿನಂತೆ 3 ಸಾವಿರ ರೂ. ಭತ್ಯೆ ನೀಡಬೇಕು. ನಿವೃತ್ತ ನೌಕರರಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡಬೇಕು. ಇಪಿಎಸ್-95 ಯೋಜನೆ ವ್ಯಾಪ್ತಿಗೆ ಬಾರದ ನಿವೃತ್ತ ನೌಕರರಿಗೆ 5 ಸಾವಿರ ರೂ. ಪಿಂಚಣಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ವೀರಭದ್ರಯ್ಯ, ಪದಾಕಾರಿಗಳ ವೀರಭದ್ರಪ್ಪ, ಬಾಲಪ್ಪ, ಶರಣಯ್ಯ, ಭೀಮಸಿಂಗರಾವ್, ಉಮೇಶ, ರುದ್ರಯ್ಯ ಗುಣಾರಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net