ಇನ್ಸ್ಪೆಕ್ಟರ್ ಅಮಾನತು

27 ckm 6 renuka prasad
ರೇಣುಕಾಪ್ರಸಾದ್
Published on

ಚಿಕ್ಕಮಗಳೂರು: ಕರ್ತವ್ಯಲೋಪ ಅರೋಪ ಮೇರೆಗೆ ಚಿಕ್ಕಮಗಳೂರು ನಗರಠಾಣೆ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.

ಮೂಲತಃ ಚನ್ನಪಟ್ಟಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಓಓಡಿಯಲ್ಲಿ ಇನ್ಸ್ಪೆಕ್ಟರ್ ಆಗಿ ರೇಣುಕಾ ಪ್ರಸಾದ್ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಇನ್ಸ್ಪೆಕ್ಟರ್ ಅಮಾನತು ಆದೇಶ ಹೊರಡಿಸಿದ್ದಾರೆ.

ದನಗಳ್ಳರು ಪೊಲೀಸರಿಗೆ ಮಚ್ಚು ತೋರಿಸಿದ್ದು, ಪೊಲೀಸ್ ಠಾಣೆ ಮೇಲೆ ಕಲ್ಲು ಎಸೆತ ಪ್ರಕರಣ, ವಕೀಲರು ಪೊಲೀಸರ ನಡುವಿನ ಸಂಘರ್ಷ ಸೇರಿ ಹಲವು ಘಟನೆಯಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ.

ಸದ್ಯ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆಗಿ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸೆಕ್ಟರ್ ಸಚಿನ್ ಕುಮಾರ್ ಅವರನ್ನು ಪ್ರಭಾರವಾಗಿ ನಿಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net