ಇನ್‌ಫ್ಯಾಬ್ ಸೆಮಿಕಂಡಕ್ಟರ್ ಸಂಸ್ಥೆಯೊಂದಿಗೆ ಎಂಸಿಇ ಒಪ್ಪಂದ

ಇನ್‌ಫ್ಯಾಬ್ ಸೆಮಿಕಂಡಕ್ಟರ್ ಸಂಸ್ಥೆಯೊಂದಿಗೆ ಎಂಸಿಇ ಒಪ್ಪಂದ
Published on

ಹಾಸನ: ಬೆಂಗಳೂರಿನ ಇನ್‌ಫ್ಯಾಬ್ ಸೆಮಿಕಂಡಕ್ಟರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯೊಂದಿಗೆ ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಸಹಯೋಗ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಭಾಗವಾಗಿ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಸಂಶೋಧನಾ ಕೇಂದ್ರದಲ್ಲಿ ಸಣ್ಣ ಗಾತ್ರದ ಸೆನ್ಸಾರ್, ಆಕ್ಚುಯೇಟರ್‌ಗಳ ವಿನ್ಯಾಸ, ಅಭಿವೃದ್ಧಿ ಮತ್ತು ಪರೀಕ್ಷೆಗೆ ಅಗತ್ಯ ತಾಂತ್ರಿಕ ನೆರವು ಮತ್ತು ಮಾರ್ಗದರ್ಶನವನ್ನು ಇನ್‌ಫ್ಯಾಬ್ ಸೆಮಿಕಂಡಕ್ಟರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಒದಗಿಸಲಿದೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಆವರಣದಲ್ಲಿರುವ ಇನ್‌ಫ್ಯಾಬ್ ಸೆಮಿಕಂಡಕ್ಟರ್ ಪ್ರೈವೇಟ್ ಲಿಮಿಟೆಡ್ ಕಚೇರಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ವೇಳೆ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಯೋಜನೆ ಮತ್ತು ಅಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದ ಡೀನ್ ಡಾ.ಎಚ್.ಜೆ. ಅಮರೇಂದ್ರ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಪ್ರಾಧ್ಯಾಪಕ ಡಾ. ಪಿ.ಬಿ.ಪ್ರತಾಪ್ , ಇನ್‌ಫ್ಯಾಬ್ ಸೆಮಿಕಂಡಕ್ಟರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಂಶೋಧನಾ ನಿರ್ದೇಶಕಿ ಡಾ.ಕೆ.ಸಾರಾ , ಪ್ರಧಾನ ಸಂಶೋಧಕ ಡಾ.ಮಹಮ್ಮದ್ ಯೂಸುಫ್ ಕಫಿಯಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net