ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮುಂದುವರಿದ ಚಿರತೆ ಸೆರೆ ಕಾರ್ಯಾಚರಣೆ

mysore
Published on

ಮೈಸೂರು: ಹೆಬ್ಬಾಳು ಕೈಗಾರಿಕೆ ಪ್ರದೇಶದಲ್ಲಿರುವ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ 5 ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಚಿರತೆಯ ಸುಳಿವು ಇನ್ನೂ ದೊರೆತಿಲ್ಲ.

ಡಿ.31ರಂದು ಇನ್ಫೋಸಿಸ್ ಭದ್ರತಾ ಸಿಬ್ಬಂದಿ ಜೀಪ್‌ಗೆ ಅಡ್ಡಲಾಗಿ ಹಾದು ಹೋಗಿದ್ದ ಚಿರತೆ, ಸಿಸಿ ಕ್ಯಾಮೆರಾದಲ್ಲಿ ಚಿರತೆಯ ಚಲನವಲನ ಪತ್ತೆಯಾಗಿತ್ತು.

ಇದನ್ನು ಹೊರತುಪಡಿಸಿದರೆ, ಕಳೆದ ಐದು ದಿನದಿಂದ ಚಿರತೆ ಯಾರ ಕಣ್ಣಿಗೂ ಬಿದ್ದಿಲ್ಲ. ಇನ್ಫೋಸಿಸ್ ಆವರಣದಲ್ಲಿ 12ಕ್ಕೂ ಹೆಚ್ಚು ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿದ್ದು, ಎರಡು ಬೋನ್‌ಗಳನ್ನು ಇಡಲಾಗಿತ್ತು. ಆದರೆ, ಚಿರತೆ ಮಾತ್ರ ಅರಣ್ಯ ಇಲಾಖೆಯ ಸಿಬ್ಬಂದಿ ಕಣ್ತಪ್ಪಿಸಿ ಯಾಮಾರಿಸುತ್ತಲೇ ಇದೆ.

ಈ ನಡುವೆ ಅರಣ್ಯ ಸಿಬ್ಬಂದಿ ಭಾನುವಾರ ಇನ್ಫೋಸಿಸ್ ಆವರಣದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿಸಿದ್ದರು. ಚಿರತೆಯ ಹೆಜ್ಜೆ ಗುರುತನ್ನು ಪತ್ತೆ ಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಜ್ಜೆ ಗುರುತು ಇದ್ದ ಸ್ಥಳದಲ್ಲಿ ಮತ್ತೆ 10 ಕ್ಯಾಮೆರಾ ಟ್ರ್ಯಾಪ್ ಅನ್ನು ಅಳವಡಿಸಿ, 1 ಕ್ಯಾಟಲ್ ಪೆನ್‌ಕೇಜ್ (ಬೋನು) ಅಳವಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net