ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕಿ

16Hirebagewadi1
ಹಿರೇಬಾಗೇವಾಡಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ 33ನೇ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇದಾರ ಪೀಠದ ಶಾಖಾ ಮಠ ಮುತ್ನಾಳ ಹಿರೇಮಠದ ಶಿವಾನಂದ ಶಿವಾಚಾರ್ಯ ಶ್ರೀ ಮಾತನಾಡಿದರು. ಗಂಗಯ್ಯ ಶಾಸ್ತ್ರಿ ಹಿರೇಮಠ, ಕಲ್ಲಯ್ಯ ಶ್ರೀ ಉದೇಶಿಮಠ ಇದ್ದರು.
Published on

ಹಿರೇಬಾಗೇವಾಡಿ: ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬುದು ಪಂಚ ಪೀಠಗಳ ತತ್ತ್ವವಾಗಿದೆ ಎಂದು ಕೇದಾರ ಪೀಠದ ಶಾಖಾಮಠ ಮುತ್ನಾಳ ಹಿರೇಮಠದ ಶಿವಾನಂದ ಶಿವಾಚಾರ್ಯ ಶ್ರೀ ಹೇಳಿದ್ದಾರೆ. ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ 33ನೇ ವಾರ್ಷಿಕೋತ್ಸವ ಅಂಗವಾಗಿ ಸೋಮಾವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬದುಕಿನಲ್ಲಿ ಶಾಂತಿ, ನೆಮ್ಮದಿ ಸಿಗಬೇಕಾದರೆ ಎಲ್ಲರೂ ಲಿಂಗಧಾರಿಗಳಾಗಬೇಕು. ನಾವು ಜೀವನದಲ್ಲಿ ಇನ್ನೊಬ್ಬರ ಬಗ್ಗೆ ಆಪಾದನೆ ಮಾಡುವ ಬದಲು ನಮ್ಮಿಂದ ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕಬೇಕು. ಪರಮಾತ್ಮನ ಅಂಶವೇ ವೀರಭದ್ರದೇವರು ಎಂದರು. ಗಂಗಯ್ಯ ಶಾಸ್ತ್ರಿ ಹಿರೇಮಠ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಕಲ್ಲಯ್ಯ ಸ್ವಾಮಿ ಉದೇಶಿಮಠ, ಗ್ರಾಪಂ ಸದಸ್ಯರಾದ ವಿಜಯ ಮಠಪತಿ, ಶ್ರೀಕಾಂತ ಮಾದುಭರಮನ್ನವರ, ಸಂಜು ದೇಸಾಯಿ, ನಿಂಗಪ್ಪ ತಳವಾರ, ಆನಂದಗೌಡ ಪಾಟೀಲ, ತಾಪಂ ಮಾಜಿ ಸದಸ್ಯ ಬಿ.ಎನ್.ಪಾಟೀಲ, ಸಿ.ಸಿ.ಪಾಟೀಲ, ಅಡಿವೆಪ್ಪ ತೋಟಗಿ, ರಾಜು ರೊಟ್ಟಿ, ರಘು ಪಾಟೀಲ, ನಾಗರಾಜ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net