ಇನ್ನೂ ಸೆರೆ ಸಿಗದ ಚಿರತೆ

30 yelandur 04
ಯಳಂದೂರು ಸಮೀಪದ ಕುಂತೂರು ಬೆಟ್ಟದಲ್ಲಿ ಚಿರತೆ ಸೆರೆಗಾಗಿ ಬೋನನ್ನು ಇರಿಸಿರುವ ಅರಣ್ಯ ಸಿಬ್ಬಂದಿ.
Published on

ಯಳಂದೂರು: ತಾಲೂಕಿನ ಮಲ್ಲಿಗೆಹಳ್ಳಿ, ಕೆಸ್ತೂರು, ಕಟ್ನವಾಡಿ, ಕಿನಕಹಳ್ಳಿ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ಕಾಣಿಸಿಕೊಂಡು ಶಾಲಾ ವಿದ್ಯಾರ್ಥಿಯ ಮೇಲೂ ದಾಳಿಮಾಡಿದ್ದ ಚಿರತೆ ಇಲ್ಲಿವರೆಗೆ ಸೆರೆಸಿಗದೆ ಅರಣ್ಯ ಇಲಾಖೆಯ ನಿದ್ದೆಗೆಡಿಸಿದೆ.


ಭಾನುವಾರವೂ ಕೂಡ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಚಿರತೆ ಕಾಣಿಸಿಕೊಂಡಿದ್ದು, ಕುಂತೂರು ಬೆಟ್ಟದ ಕಲ್ಲುಬಂಡೆಯ ಸಂದುಗಳಲ್ಲಿ ಆವಾಸ ಸ್ಥಳ ಮಾಡಿಕೊಂಡಿದೆ. ಇದರಿಂದ ಇಲಾಖೆಗೆ ಸೆರೆ ಹಿಡಿಯುವುದು ಕಷ್ಟ ಸಾಧ್ಯವಾಗಿದೆ.


ಚಿರತೆ ಕಾರ್ಯಪಡೆ ತಂಡ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರೂ ಚಿರತೆ ಬಂಧಿಸಲು ಸಾಧ್ಯವಾಗಿಲ್ಲ.


ಕೊಳ್ಳೇಗಾಲ ಬಫರ್‌ಜೋನ್ ವ್ಯಾಪ್ತಿಗೆ ಒಳಪಡುವ ಕುಂತೂರು ಬೆಟ್ಟಕ್ಕೆ ಹೊಂದಿಕೊಂಡಂತೆ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯೂ ಇದೆ. ಅಲ್ಲದೆ, ಅಕ್ಕಪಕ್ಕದಲ್ಲಿ ಸಿಲ್ಕಲ್‌ಪುರ, ಕುಂತೂರು, ಕುಂತೂರುಮೋಳೆ, ಕಲಿಯೂರು, ಮಾಲಂಗಿ ಸೇರಿದಂತೆ ಅನೇಕ ಗ್ರಾಮಗಳಿದ್ದು ಇಲ್ಲಿನ ಜನರಿಗೆ ಸುರಕ್ಷಿತವಾಗಿರುವಂತೆ ತಿಳಿಸಲಾಗಿದೆ ಎಂದು ಯಳಂದೂರು ಬಿಆರ್‌ಟಿ ವಲಯ ಅರಣ್ಯಾಧಿಕಾರಿ ಲೋಕೇಶ್‌ಮೂರ್ತಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net