

ಕಲಬುರಗಿ: ಅಗತ್ಯ ಸೇವೆಯ ವಹಿವಾಟು ಹೊರತುಪಡಿಸಿ ಸೂಪರ್ ಮಾರ್ಕೆಟ್ ಅಂಗಡಿ-ಮುಂಗಟ್ಟುಗಳು ಮುಂದಿನ ಆದೇಶದವರೆಗೆ ಬಂದ್ ಆಗಿರಲಿವೆ. ಸರ್ಕಾರ ರಿಲ್ಯಾಕ್ಸ್ ಕೊಟ್ಟಿದ್ದು ನಿಯಮಗಳಿಗೆ ಹೊರತು, ಕರೊನಾಕ್ಕೆ ಅಲ್ಲ ಎಂಬುದನ್ನು ಅರಿತು ಜನರು ಎಲ್ಲಿವರೆಗೆ ನಡೆದುಕೊಳ್ಳುವುದಿಲ್ಲವೋ ಅಲ್ಲಿವರೆಗೂ ಕೋವಿಡ್-19 ಸೋಂಕು ಹರಡುವಿಕೆ ನಿಲ್ಲುವುದಿಲ್ಲ.
ಲಾಕ್ಡೌನ್ ಸಡಿಲಿಕೆಯಾಗುತ್ತಲೇ ನಗರದಲ್ಲಿ ಜನರ ಓಡಾಟ ಮಾಮೂಲು ಎನಿಸಿದ್ದು, ಜನಜೀವನ ಸಹಜ ಸ್ಥಿತಿ ಮರಳುತ್ತಿರುವಂತೆ ಕಾಣುತ್ತಿದೆ. ಆತಂಕವೆಂದರೆ, ದಿನದಿಂದ ದಿನಕ್ಕೆ ಕರೊನಾ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಹೀಗಾಗಿ ಮಾರ್ಕೆಟ್ ಒಪನ್ ಮಾಡಲು ಬ್ರೇಕ್ ಹಾಕಿದೆ.
ಜಿಲ್ಲಾಧಿಕಾರಿ ಶರತ್ ಸೋಮವಾರ ವರ್ತಕರ ಜತೆ ಸಭೆ ನಡೆಸಿ ಇನ್ನೂ ಕೆಲದಿನ ಬಂದ್ ಮುಂದುವರಿಯುವುದು ಎಲ್ಲರ ಹಿತದೃಷ್ಟಿಯಿಂದ ಉತ್ತಮ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಇದಕ್ಕೆ ಎಲ್ಲ ವ್ಯಾಪಾರಿಗಳು ಸಹಮತ ಸೂಚಿಸಿದ್ದಾರೆ. ಮುಂದಿನ ತಮ್ಮ ಅದೇಶದವರೆಗೆ ವಹಿವಾಟು ಬಂದ್ ಮಾಡಿ ಸಹಕಾರ ನೀಡುವುದಾಗಿ ಹೇಳಿದ್ದರಿಂದ ಜಿಲ್ಲಾಡಳಿತ ಯಾವುದೇ ಮಾರ್ಗಸೂಚಿ ಮತ್ತು ವಹಿವಾಟಿನ ಬಗ್ಗೆ ಅಧಿಸೂಚನೆ ಹೊರಡಿಸಿಲ್ಲ. ಶೀಘ್ರವೇ ಇನ್ನೊಂದು ಸಲ ವ್ಯಾಪಾರಿಗಳ ಸಭೆ ಕರೆದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.
ಮಾಜಿ ಎಂಎಲ್ಸಿ ಶಶೀಲ್ ನಮೋಶಿ, ಎಚ್ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ್, ಪ್ರಮುಖರಾದ ಅನಂದ ದಂಡೋತಿ, ಗೋಪಾಲ ಬುಚನಳ್ಳಿ, ಡಿಸಿಪಿ ಕಿಶೋರಬಾಬು, ಎಸ್ಪಿ ಯಡಾ ಮಾಟರ್ಿನ್ ಮಾರ್ಬನ್ಯಾಂಗ್, ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಇತರರಿದ್ದರು.
ಹೋಟೆಲ್, ಕಟಿಂಗ್ ಶಾಪ್ ಸೇರಿ ಯಾವುದೂ ತೆರೆಯಲ್ಲ. ಸೂಪರ್ಮಾರ್ಕೆಟ್ ಸಂಪೂರ್ಣ ಬಂದ್ ಆಗಿರಲಿದೆ. ಅಲ್ಲೊಂದು ಇಲ್ಲೊಂದು ಅಂಗಡಿ ತೆರೆದು ವ್ಯಾಪಾರ ಮಾಡುತ್ತಿರುವುದು ಕಂಡು ಬರುತ್ತಿದೆ.
ಕರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ವ್ಯಾಪಾರ ವಹಿವಾಟು ಆರಂಭಿಸುವ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪರಿಸ್ಥಿತಿ ನೋಡಿಕೊಂಡು ಮತ್ತು ಕಂಟೇನ್ಮೆಂಟ್ ಜೋನ್ಗಳಲ್ಲಿ ನಡೆಯುತ್ತಿರುವ ಆರೋಗ್ಯ ತಪಾಸಣೆ ವರದಿಗಳು ಬಂದ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
| ಶರತ್ ಬಿ. ಜಿಲ್ಲಾಧಿಕಾರಿ