ಇನ್ನಷ್ಟು ವಿಮಾನ ಹಾರಾಟಕ್ಕೆ ಯತ್ನ

Bidar Viman
Published on

ಬೀದರ್: ಇಲ್ಲಿನ ನಾಗರಿಕ ವಿಮಾನಯಾನದ (ಬೀದರ್ ಏರ್ ಪೊರ್ಟ್) ಪ್ರಥಮ ವರ್ಷಾಚರಣೆ ಭಾನುವಾರ ಸಂಭ್ರಮದಿಂದ ನಡೆಯಿತು. ಚಿದ್ರಿ ಹತ್ತಿರದ ಏರ್ ಪೋರ್ಟ್ ಟರ್ಮಿನಲ್ ನಲ್ಲಿ ಸರಳ ಸಮಾರಂಭ ಜರುಗಿತು.

ಸಂಸದ ಭಗವಂತ ಖೂಬಾ ಅವರು ವರ್ಷಾಚರಣೆ ನಿಮಿತ್ತ ಕೇಕ್ ಕಟ್ ಮಾಡಿ ಮಾತನಾಡಿ, ಗಡಿ ಜಿಲ್ಲೆಯ ಜನರ ಬಹು ವರ್ಷಗಳ ವಿಮಾನಯಾನ ಸೌಲಭ್ಯ ಕನಸು ಸಾಕಾರಗೊಂಡು ವರ್ಷ ಕಳೆದಿದೆ. ಕಳೆದ ವರ್ಷ ಫೆ.7ರಂದು ನಾಗರಿಕ ವಿಮಾನಯಾನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಾಲನೆ ನೀಡಿದ್ದರು. ನನ ಜತೆಗೆ ವಿಮಾನಯಾನದ ಪ್ರಾರಂಭಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರ ಶ್ರಮ ಸಹ ಅಪಾರ ಎಂದು ಹೇಳಿದರು.

ವಿಮಾನಯಾನ ಆರಂಭವಾದಾಗಿನಿಂದ ಈವರೆಗೆ 14380 ಜನರು ಪ್ರಯಾಣಿಸಿದ್ದಾರೆ. ಕರೊನಾ ಬರದಿದ್ದರೆ ಈವರೆಗೆ ಅಂದಾಜು 45 ಸಾವಿರ ಜನರು ಬೀದರ್ ನಿಂದ ಸಂಚಾರ ಮಾಡುವ ಸಾಧ್ಯತೆ ಇತ್ತು. ಬರುವ ದಿನಗಳಲ್ಲಿ ಇಲ್ಲಿಂದ ಮತ್ತಷ್ಟು ವಿಮಾನಗಳ ಓಡಾಟಕ್ಕೆ ಅನುಕೂಲ ಕಲ್ಪಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಟರ್ಮಿನಲ್ ಮ್ಯಾನೇಜರ್ ಅಮಿತ್ ಮಿಶ್ರಾ, ಪ್ರಮುಖರಾದ ಗುರುನಾಥ ಕೊಳ್ಳುರ್, ಪ್ರಕಾಶ ಟೊಣ್ಣೆ, ಹಣಮಂತ ಬುಳ್ಳಾ, ಜಗದೀಶ ಖೂಬಾ, ಚಂದ್ರಕಲಾ ವಿಶ್ವಕರ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net