

ಗದಗ: ಕಸವನ್ನು ಕಸವೆಂದು ಬೀಸಾಕದೆ ಅದರ ಮರು ಬಳಕೆಯ ಉಪಯೋಗವನ್ನು ನಾವೆಲ್ಲ ತಿಳಿದುಕೊಳ್ಳಬೇಕು ಎಂದು ಇನ್ನರ್ವ್ಹೀಲ್ ಕ್ಲಬ್ ಮಾಜಿ ಅಧ್ಯೆ ಸರೋಜಿನಿ ಹಕ್ಕಾಪಕ್ಕಿ ಹೇಳಿದರು.
ಇನ್ನರವೀಲ್ ಕ್ಲಬ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕಸದಿಂದ ರಸ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಲಬ್ನ ಸದಸ್ಯರಿಗೆ ಕಸದ ಮರುಬಳಕೆಯ ಪ್ರಯೋಜನಗಳನ್ನು, ಕರಕುಶಲದ ವಿನ್ಯಾಸಗಳನ್ನು ತಿಳಿಸಿದರು. ಒಣಗಿದ ತುಪ್ಪರಿಕಾಯಿ, ತೆಂಗಿನ ನಾರುಗಳಿಂದ ಪರ್ಸ್, ಬೆಡ್ಲ್ಯಾಂಪ್, ಹೂದಾನಿ, ಹೂವಿನ ಬೊಕ್ಕೆಗಳನ್ನು ಮಾಡು ಕೌಶಲ್ಯವನ್ನು ತಿಳಿಸಿದರು.
ರಜನಿ ಪಾಟೀಲ ಮಾತನಾಡಿ, ಮಿದುಳಿಗೆ ಕೆಲಸವನ್ನು ಕೊಟ್ಟು ಅದರಿಂದ ನವೀನ ರೀತಿಯ ಉಪಯೋಗಿಸಲು ಅನುಕೂಲವಾಗುವ ಪರಿಸರಸ್ನೇಹಿ ವಸ್ತುಗಳನ್ನು ತಯಾರಿಸಿ ಮಾಹಿತಿ ನೀಡಿದ್ದು ಉಪಯುಕ್ತವಾಗಿದೆ. ಕಚ್ಚಾ ವಸ್ತುಗಳನ್ನು ಬೀಸಾಕದೆ ಮತ್ತೆ ಉಪಯೋಗಿಸಿ ಅದರ ಮರುಬಳಕೆಗೆ ನಾವು ಹೆಚ್ಚಿನ ಗಮನ ಹರಿಸೋಣ ಎಂದರು.
ರಾಜೇಶ್ವರಿ ಬಳ್ಳಾರಿ, ಮೀನಾ ಸಜ್ಜನರ, ಶಾಂತಾ ಮುಂದಿನಮನಿ, ಪ್ರೇಮಾ ಮೇಟಿ, ವಿದ್ಯಾ ಗಂಜಿಹಾಳ, ಸರೋಜಾ ಆಲೂರ, ಶ್ರೇಯಾ ಪವಾಡಶೆಟ್ಟರ, ಆಶಾ ಪಟ್ಟಣಶೆಟ್ಟಿ, ಪ್ರೇಮಾ ಹಂದಿಗೋಳ, ನಾಗರತ್ನಾ ಪಾಟೀಲ, ಸುಲೋಚನಾ ಐಹೊಳ್ಳಿ, ವಿಜಯಲಕ್ಷಿ$್ಮ ಮಾನ್ವಿ, ನೀಲಾಂಬಿಕಾ ಉಗಲಾಟ, ಸುಮಾ ಪಾಟೀಲ, ರೇಶ್ಮಾ ಬಸರಿಗಿಡದ, ಪುಷ್ಪಾ ಭಂಡಾರಿ, ತನುಜಾ ಗೋವಿಂದಪ್ಪನವರ, ಸಂಧ್ಯಾ ಕೋಟಿ, ಸುಶೀಲಾ ಕೋಟಿ ಹಲವರು ಇದ್ದರು.