

ಚಿತ್ರದುರ್ಗ: ನಗರದಲ್ಲಿ ಇದೇ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭವಾಗಲಿದ್ದು,ಪೂರಕ ಕ್ರಮಗಳನ್ನು ಕೈ ಗೊಳ್ಳಲಾಗುವು ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ಜಿಪಂದಲ್ಲಿ ಶುಕ್ರವಾರ ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ,ಕಾಲೇಜು ಪ್ರಾರಂಭಕ್ಕೆ ಅನುಮತಿ ದೊರೆತಿದೆ.
ಜಿ.ಆರ್.ಹಳ್ಳಿ ದಾವಣಗೆರೆ ವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಟ್ಟಡದಲ್ಲಿ ಮೊದಲ ವರ್ಷದ ತರಗತಿ ಪ್ರಾರಂಭಿಸಲು ವಿವಿ ಕುಲಪತಿ ಅವರ ಅನುಮತಿ ಬೇಕಿದೆ. ಕಾಲೇಜಿಗೆ 80 ತಜ್ಞ ವೈದ್ಯರು ಹಾಗೂ ಸಿಬ್ಬಂದಿ ನೇಮಕದ ಪ್ರಸ್ತಾವನೆ ಆರ್ಥಿಕ ಇಲಾಖೆಯಲ್ಲಿದೆ. ಆಡಳಿತಾತ್ಮಕ ಕಾರ್ಯಗಳ ನಿರ್ವಹಣೆಗೆ ಅನುದಾನ ಬಿಡುಗಡೆ ಆಗಬೇಕಿದೆ ಎಂದು ಕಾಲೇಜು ವಿಶೇಷಾಧಿಕಾರಿ ಡಾ.ಬಿ.ವೈ.ಯುವರಾ ಜ್ ಹೇಳಿದರು.
ವಿವಿ ಪಿಜಿ ಸೆಂಟರ್‌ನ 2 ಬ್ಲಾಕ್‌ಗಳ ಪೈಕಿ ಒಂದು ಬ್ಲಾಕ್‌ನ್ನು ತಾತ್ಕಾಲಿಕ ಬಳಸಲು ಕುಲಪತಿ ಅನುಮತಿ ನೀಡಿದರೆ ಮೊದಲ ವರ್ಷದ ಎಂಬಿಬಿಎಸ್ ತರಗತಿ ಪ್ರಾರಂಭಕ್ಕೆ ಅನುಕೂಲವಾಗಲಿದೆ ಎಂದು ಡಿಸಿ ಜಿಆರ್‌ಜೆ ದಿವ್ಯಾಪ್ರಭು ಹೇಳಿದರು. ವೈದ್ಯಕೀಯ ಶಿಕ್ಷಣ,ಉನ್ನತ ಶಿಕ್ಷಣ ಇಲಾಖೆ ಸಚಿವರು ಹಾಗೂ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮದ ಭರವಸೆಯನ್ನು ಸಚಿವರು ನೀಡಿದರು. ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಅಸಡ್ಡೆ,ಭ್ರಷ್ಟಾಚಾರ ಸಲ್ಲದೆಂದು ಅಧಿಕಾರಿಗಳನ್ನು ಎಚ್ಚರಿಸಿದರು.
ಜಿಲ್ಲೆಯಲ್ಲಿ ತೆಂಗಿನ ಮರಗಳಿಗೆ ಕಪ್ಪು ತಲೆ ಹುಳುವಿನ ಬಾಧೆ ಹೆಚ್ಚಾಗಿದ್ದು,ರೋಗ ಹತೋಟಿಗೆ ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂದು ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಪ್ರಶ್ನಿಸಿದರು. ಹೊಸದುರ್ಗ ತಾಲೂಕಿನಲ್ಲಿ 1620 ಹೆಕ್ಟೇರ್,ಹಿರಿಯೂರು-433 ಹೆಕ್ಟೇರ್ ಹಾಗೂ ಹೊಳಲ್ಕೆರೆ ತಾಲೂಕಿನಲ್ಲಿ 830 ಹೆಕ್ಟೇರ್ ತೆಂಗಿಗೆ ರೋಗ ತಗುಲಿದೆ. ಈ ಕುರಿತು ಸಮೀಕ್ಷೆ ಮಾಡಲಾಗಿದೆ. ಅತಿಯಾದ ಉಷ್ಣಾಂಶದಿಂದಾಗಿ ರೋಗ ಹೆಚ್ಚಾಗಿದೆ.
ಉತ್ತಮವಾಗಿ ಮಳೆಯಾದರೆ ರೋಗ ಹತೋಟಿಗೆ ಬರಲಿದ್ದು,ರೋಗ ಹತೋಟಿಗೆ ಸಂಬಂಧಿಸಿದಂತೆ ವಿಜ್ಞಾನಿಗಳು ಸೋಮವಾರ ದೊಳಗೆ ವರದಿ ಸಲ್ಲಿಸುವ ನಿರೀಕ್ಷೆ ಇದೆ ಎಂದು ತೋಟಗಾರಿಕೆ ಡಿಡಿ ಸವಿತಾ ತಿಳಿಸಿದರು. ಅಂದಾಜು 2 ಸಾವಿರ ಹೆಕ್ಟೇರ್‌ಗೆ ತೆಂಗು ಬೆಳೆ ಪ್ರದೇಶಕ್ಕೆ ಪರಿಹಾರ ಘೋಷಿಸಲು,ಅಂದಾಜು 8 ಕೋಟಿ ರೂ.ಅಗತ್ಯವಿದೆ ಎಂದರು.
ಚಳ್ಳಕೆರೆ ತಾಲೂಕಿನಲ್ಲಿ ಬೆಳೆ ಪರಿಹಾರ ದುರ್ಬಳಕೆ ದೂರುಗಳ ಪೈಕಿ ಕೆಲವು ಪ್ರಕರಣಗಳಲ್ಲಿ ವಿರುದ್ಧ ಕ್ರಮ ಜರುಗಿದೆ. ಆದರೆ ಜಿಲ್ಲಾ ದ್ಯಂತ ಇಂತಹ ಪ್ರಕರಣಗಳು ನಡೆದಿರುವ ಸಾಧ್ಯತೆಗಳಿವೆ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಆತಂಕ ವ್ಯಕ್ತಪಡಿಸಿದರು. ಬೆಳೆ ಪರಿ ಹಾರ,ಬೆಳೆವಿಮೆ ಪರಿಹಾರ ದುರ್ಬಳಕೆಯ ತನಿಖೆಗೆ ಸಮಿತಿ ರಚಿಸುವಂತೆ ರಘುಮೂರ್ತಿ ಅವರು ಒತ್ತಾಯಿಸಿದರು. ತಪ್ಪಿತಸ್ಥರ ವಿರುದ್ಧ ತೆಗೆದುಕೊಂಡಿರುವ ಕ್ರಮದ ಕುರಿತು ಡಿಸಿ ವಿವರಿಸಿದರು.
ಚಿತ್ರದುರ್ಗದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ಮಾತನಾಡಿ,ಗ್ರಾಮೀಣ ಭಾಗಗಳಿಗೆ ಬಸ್‌ಗಳ ಸಂಚಾರವನ್ನು ಹೆಚ್ಚಿಸಬೇಕು. ಚಿತ್ರದುರ್ಗ ಬಸ್ ನಿಲ್ದಾಣದ ಬಳಿ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು,ಪೊಲೀಸ್ ಬೀಟ್ ಹೆಚ್ಚಿಸಬೇಕು,ಸೂಕ್ತ ವಿದ್ಯುತ್ ದೀಪದ ವ್ಯವಸ್ಥೆ ಮಾಡಬೇಕು. ಶನಿವಾರ,ಭಾನುವಾರ ಆಡುಮಲ್ಲೇಶ್ವರಕ್ಕೆ ನಗರ ಸಾರಿಗೆ ಬಸ್ ಸಂಚಾರ ವನ್ನು ಮತ್ತೆ ಆರಂಭಿಸಬೇಕೆಂ ದರು. ನಗರದಲ್ಲಿ ನಿರ್ಮಿಸಿರುವ ರೋಡ್ ಡಿವೈಡರ್‌ಗಳು ಅವೈಜ್ಞಾನಿಕವಾಗಿವೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೋಗುವ ಏಕಮುಖ ಸಂಚಾರ ರಸ್ತೆಯಲ್ಲೂ ಡಿವೈಡರ್ ನಿರ್ಮಿಸಲಾಗಿದೆ. ಇವುಗಳ ತೆರವು ಯಾವಾಗ ಎಂದು ಸಾರ್ವಜನಿ ಕರು ಪ್ರಶ್ನಿಸುತ್ತಿದ್ದಾರೆಂದರು.
ಲೋಕೋಪಯೋಗಿ ಇಲಾಖೆ ಇಇ ಮಲ್ಲಿಕಾರ್ಜುನ್ ಅವರು ಉತ್ತರಿಸಿ,ರಸ್ತೆ,ಡಿವೈಡರ್ ಹಾಗೂ ಡಿವೈಡರ್ ಮೇಲೆ ಅಲಂಕಾರಿಕ ಗಿಡ ಗಳಿಗಾಗಿ ಸೇರಿ 32 ಕೋಟಿ ರೂ.ಅನುದಾನದಡಿ ನಿರ್ಮಿಸಲಾಗಿದೆ. ಡಿವೈಡರ್ ಸಮಸ್ಯೆ ಬಗ್ಗೆ ಸಮೀಕ್ಷೆಯ ವರದಿ ಪಡೆಯಲಾಗುತ್ತಿದ್ದು, ಇದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲನ್ ಆದಿತ್ಯ ಬಿಸ್ವಾಸ್ ಅವರು ಪ್ರತಿಕ್ರಿಯಿಸಿ,ಚಿತ್ರದುರ್ಗದಲ್ಲಿ ಡಿವೈಡರ್‌ಗಳು ಅವೈಜ್ಞಾನಿಕ ವಾ ಗಿ ನಿರ್ಮಿಸಲಾಗಿದೆ. ಬ್ಲಾಕ್‌ಸ್ಪಾಟ್,ತಿರುವುಗಳನ್ನು ಗಮನಿಸಿ ಜೂ.26ರೊಳಗೆ ವರದಿ ಸಲ್ಲಿಸಬೇಕು. ಸಮಸ್ಯೆ ಪರಿಹಾರ ಆಗುವವರೆಗೆ ಗುತ್ತಿಗೆದಾರರಿಗೆ ಹಣ ಪಾವತಿಸಬಾರದೆಂದರು. ವಿದ್ಯಾರ್ಥಿ ನಿಲಯಗಳಲ್ಲಿ ಊಟದ ವ್ಯವಸ್ಥೆ,ಮೂಲ ಸೌಕರ್ಯಗಳ ಬಗ್ಗೆ ದೂರುಗಳು ಬರಬಾರದು ಎಂದು ಸಚಿವರು ತಾಕೀತು ಮಾಡಿದರು. ಗ್ರಾಮೀಣ ವಿದ್ಯಾರ್ಥಿಗಳಿಗೆ ಚಿತ್ರದುರ್ಗದಲ್ಲಿ ಹಾಸ್ಟೆಲ್ ಪ್ರವೇಶ ನಿರಾಕರಿಸಬಾ ರದು ಎಂದರು.
ಗುಣಮಟ್ಟದ ಆಹಾರ ಸಾಮಗ್ರಿ,ತರಕಾರಿಗಳನ್ನು ವಿದ್ಯಾರ್ಥಿನಿಲಯಗಳಿಗೆ ಪೂರೈಕೆ ಆಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿರು ವು ದಾಗಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಹೇಳಿದರು. ಹಾಸ್ಟೆಲ್‌ಗಳಿಗೆ ಹಠಾತ್ ಭೇಟಿ ನೀಡಿ ಪರಿಶೀಲಿಸುವು ದಾಗಿ ಬಿಸ್ವಾಸ್ ತಿಳಿಸಿದರು.
ಆಹಾರ ಕಳ್ಳತನ ದೊಡ್ಡ ಅಪರಾಧ. ಟೆಂಡರ್ ಪಡೆದವರು ಆಹಾರ ಸಾಮಗ್ರಿಗಳನ್ನು ಸ್ಥಳೀಯರಿಂದ ಸರಬರಾಜು ಮಾಡಿಸುತ್ತಾ ರೆಂದು ಅಸಮಾಧಾನ ವ್ಯಕ್ತಪಡಿಸಿದರು. ಜಿ.ಪಂ ಸಿಇಒ ಎಂ.ಎಸ್.ದಿವಾಕರ್,ಆಹಾರ ಧಾನ್ಯಗಳ ಬಿಲ್ ಡೆಲವರಿ ಚಲನ್,ವಾಹನ ಸಂಖ್ಯೆ ನಮೂದಿಸಲು ಸೂಚಿಸಲಾಗಿದೆ ಎಂದರು.
ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ,ವಸತಿ ಶಾಲೆಗಳ ಪ್ರವೇಶದಲ್ಲಿ ಈಗಿರುವ ಶೇ.25ರ ಮೀಸಲನ್ನು ಶೇ.50ಕ್ಕೆ ಹೆಚ್ಚಿಸಿದರೆ ಆಯಾ ತಾ ಲೂಕಿನ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು. ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಕೆಇಎ ಮೂಲಕ ಮೆರಿಟ್ ಆಧರಿಸಿ ಆಯ್ಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ, ಎಂಎಲ್‌ಸಿ ಸದಸ್ಯ ಕೆ.ಎನ್.ನವೀನ್,ಎಸ್‌ಪಿ ಕೆ.ಪರಶುರಾಮ್ ಮತ್ತಿತರರು ಇದ್ದರು.
ಬಾಕ್ಸ್..
ಹಾರ್ಟ್ ಕೇರ್ ಸೆಂಟರ್ ಪ್ರಾರಂಭಿಸಿ
ಹೃದ್ರೋಗ ಪ್ರಕರಣಗಳ ಹೆಚ್ಚಳದಿಂದಾಗಿ ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಹಾರ್ಟ್ ಕೇರ್ ಸೆಂಟರ್ ಪ್ರಾರಂಭಿಸುವಂತೆ ಶಾಸಕ ಎನ್.ವೈ.ಗೋಪಾಲಕೃಷ್ಣ ಸಚಿವರಿಗೆ ಮನವಿ ಮಾಡಿದರು.
ಬಾಕ್ಸ್..
60 ಸಾವಿರ ಮಹಿಳೆಯರ ಪ್ರಯಾಣ
ಶಕ್ತಿ ಯೋಜನೆಯಡಿ ಚಿತ್ರದುರ್ಗ ಕೆಎಸ್ ಆರ್‌ಟಿಸಿ ವಿಭಾಗದಲ್ಲಿ ನಿತ್ಯ 60 ಸಾವಿರಕ್ಕೂ ಅಧಿಕ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಇದರ ವೆಚ್ಚ 20 ಲಕ್ಷ ರೂ.ಅಧಿಕವಿದೆ. ಈ ಮೊದಲು 7 ಸಾವಿರ ಮಹಿಳೆಯರು ಪ್ರಯಾಣಿಸುತ್ತಿದ್ದರು. ವಿಭಾಗ ವ್ಯಾಪ್ತಿಯಲ್ಲಿ ನಿತ್ಯ 290 ಬಸ್‌ಗಳು ಸಂಚರಿಸುತ್ತಿವೆ. ಮೊದಲಿದ್ದ ನಿತ್ಯ ಆದಾಯ ಸಂಗ್ರಹದ ಮೊತ್ತ 35 ಲಕ್ಷ ರೂ.ಗಳಿಂದ 45 ಲಕ್ಷ ರೂ.ಗೆ ಏರಿದೆ. ಏರಿಕೆ ಮೊತ್ತ ದಲ್ಲಿ ಮಹಿಳೆಯರ ಉಚಿತ ಪ್ರಯಾಣದ ಮೊತ್ತ ಸೇರಿದೆ. ವಿಭಾಗಕ್ಕೆ ಹೊಸದಾಗಿ 100 ಹೊಸ ಬಸ್‌ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಡಿಸಿ ಸಿದ್ದೇಶ್ವರ ಹೆಬ್ಬಾಳ ಹೇಳಿದರು. ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆ ಆಗಬಾರದು ಎಂದು ಸಚಿವರು ಸೂಚಿಸಿ ದರು.
(ಸಿಟಿಡಿ 23ನ್ಯೂಸ್ ಝೆಡ್‌ಪಿ ಕೆಡಿಪಿ)
ಚಿತ್ರದುರ್ಗದಲ್ಲಿ ಶುಕ್ರವಾರ ನಡೆದ ಜಿಪಂ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಶಾಸಕರಾದ ಟಿ.ರಘುಮೂರ್ತಿ,ಕೆ.ಸಿ.ವೀರೇಂದ್ರ ಪಪ್ಪಿ,ಎನ್.ವೈ.ಗೋಪಾಲಕೃಷ್ಣ,ಎಂ.ಚಂದ್ರಪ್ಪ,ಬಿ.ಜಿ.ಗೋವಿಂದಪ್ಪ,ಎಂಎಲ್‌ಸಿ ಕೆ.ಎಸ್.ನವೀನ್ ಹಾಗೂ ಅಧಿಕಾರಿಗಳು ಇದ್ದರು.