ಇದು ತಾಲೂಕು ಕಚೇರಿನಾ...ಗ್ಯಾರೇಜಾ?

09
Published on

ನೆಲಮಂಗಲ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಗುರುವಾರ ಬೆಳಗ್ಗೆ ತಾಲೂಕು ಕಚೇರಿಗೆ ದಿಢೀರ್​ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಣೇಗೌಡನಹಳ್ಳಿಯಲ್ಲಿ ಆಯೋಜಿಸಿದ್ದ ವೃಷಭಾವತಿ ವ್ಯಾಲಿ ಯೋಜನೆ ಉದ್ಘಾಟನಾ ಸಮಾರಂಭಕ್ಕೆ ತೆರಳಿದ್ದ ಸಚಿವರು, ಬೆಳಗ್ಗೆ 11 ಗಂಟೆಗೆ ತಾಲೂಕು ಕಚೇರಿಗೆ ಆಗಮಿಸಿ ಅಲ್ಲಿನ ಅವ್ಯವಸ್ಥೆ, ಕಚೇರಿಯಲ್ಲಿನ ಕಡತಗಳನ್ನು ಪರಿಶೀಲನೆ ನಡೆಸಿದರು. ಕಡತಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಜತೆಗೆ ತಾಲೂಕು ಕಚೇರಿ ಒಳಗೆ ಕಸದ ರಾಶಿ, ಹಳೇ ಬೀರು, ಚುನಾವಣಾ ಸಾಮಾಗ್ರಿಗಳನ್ನು ಕಂಡು ಸಿಟ್ಟಿಗೆದ್ದ ಸಚಿವರು, ಇದು ತಾಲೂಕು ಕಚೇರಿನಾ ಅಥವಾ ಗ್ಯಾರೇಜಾ ಎಂದು ಪ್ರಶ್ನಿಸಿದರು.

ತಾಲೂಕು ಕಚೇರಿಯಲ್ಲಿ ಪೋಡಿ ದುರಸ್ಥಿ ವೇಗವಾಗಿ ನಡೆಯದಿರುವುದನ್ನು ಕಂಡು ಅಧಿಕಾರಿಗಳಿಗೆ ಬೇರೆ ಏನೇನೋ ಮಾಡುತ್ತಿದ್ದೀರಿ... ನಿಮಗೆ ಎಲ್ಲರದರಲ್ಲೂ ಆಸಕ್ತಿ ಇದೆ. ಆದರೆ ಕೆಲಸದಲ್ಲಿ ಆಸಕ್ತಿ ಇಲ್ಲ ಎಂದು ತೀವ್ರ ತರಾಟೆ ತಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net