ಇತ್ತೀಚಿನ ಆಹಾರ ಪದ್ಧತಿಯಿಂದ ಅಲ್ಪಾಯಸ್ಸು

27KMD-1
Published on

ಕೆ.ಎಂ.ದೊಡ್ಡಿ: ಹಿಂದಿನ ಕಾಲದಲ್ಲಿ ಜನರು ಸೇವಿಸುತ್ತಿದ್ದ ಆಹಾರ ಪದ್ಧತಿಯಿಂದ ಧೀರ್ಘಾಯಸ್ಸು ಪಡೆಯುತ್ತಿದ್ದರು. ಆದರೆ ಇತ್ತೀಚಿನ ಆಹಾರ ಪದ್ಧತಿಯಿಂದ ಜನರು ಅಲ್ಪಾಯಸ್ಸುಗಳಾಗುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಧನಂಜಯ್ ಆತಂಕ ವ್ಯಕ್ತಪಡಿಸಿದರು.


ಇಲ್ಲಿನ ದೊಡ್ಡರಸಿನಕೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್ , ಭಾರತೀ ಹೆಲ್ತ್ ಸೈನ್ಸ್, ಜಿ.ಮಾದೇಗೌಡ ಇನ್ಸ್‌ಟ್ಯೂಟ್ ಆಫ್ ನ್ಯಾಚ್ಯುರಲ್ ಥೆರಪಿ ಮತ್ತು ಯೋಗಿಕ್ ಸೈನ್ಸ್, ಆಸ್ಟರ್ ಜಿ.ಮಾದೇಗೌಡ ಆಸ್ಪತ್ರೆ ಭಾರತೀನಗರ ಇವರ ಸಹಯೋಗದಲ್ಲಿ ಸೋಮವಾರ ನಡೆದ ಆರೋಗ್ಯ ಉಚಿತ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಆಸ್ಪತೆಗಳು ಹೆಚ್ಚಾದಂತೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಜನತೆ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯವಹಿಸದೆ ಪ್ರತಿ 6 ತಿಂಗಳಿಗೊಮ್ಮೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನಹರಿಸಿ ಎಂದು ತಿಳಿಸಿದರು.


ಭಾರತೀ ಹೆಲ್ತ್ ಸೈನ್ಸ್ ನಿರ್ದೇಶಕ ಡಾ.ತಮಿಜ್‌ಮಣಿ ಮಾತನಾಡಿ, ಮಾಜಿ ಸಂಸದ ದಿವಂಗತ ಜಿ.ಮಾದೇಗೌಡ ಅವರು ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಉತ್ತಮ ಶಿಕ್ಷಣ ಸಂಸ್ಥೆ ಕಟ್ಟಿದ್ದು, ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ತಮ್ಮ ಸ್ವಂತ ಮನೆಯನ್ನು ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ದಾನವಾಗಿ ನೀಡುವ ಮೂಲಕ ಸಮಾಜಿಕ ಕಾಳಜಿಯನ್ನು ಎತ್ತಿ ಹಿಡಿದಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.


ಶಿಬಿರದಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಔಷಧಿ ಪಡೆದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ,ವಿಷ್ಣುಪ್ರಸಾದ್, ಆಸ್ಟರ್ ಜಿ.ಮಾದೇಗೌಡ ಆಸ್ಪತ್ರೆಯ ಯೂನಿಟ್ ಹೆಡ್ ಗಣೇಶ ಪ್ರಭು, ಪ್ರಾಂಶುಪಾಲ ಡಾ.ಬಾಲಸುಬ್ಯಮಣ್ಯಂ, ಡಾ.ಮಂಜು ಜೇಕಬ್, ಡಾ.ಶಾಂತಕುಮಾರ್, ಡಾ.ಕಲಾಶ್ರೀ. ಡಾ.ಮಹೇಶ್ ಲೋನಿ, ಗ್ರಾ.ಪಂ. ಅಧ್ಯಕ್ಷೆ ಸಮೀರಭಾನು ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net