ಇತಿಹಾಸದ ತಾತ್ಸಾರ ಸಲ್ಲದು

9SPT3
: ಸೋಮವಾರಪೇಟೆ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಎಸ್.ಎ. ಮುರಳೀಧರ್ ಉದ್ಘಾಟಿಸಿದರು. ಎಚ್.ಎನ್.ರಾಜು, ಜಮೀರ್ ಅಹಮ್ಮದ್, ಶ್ರೀಶಾ ಇದ್ದರು.
Published on

ಸೋಮವಾರಪೇಟೆ: ಯಡೂರಿನ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಇತಿಹಾಸ ಸಂಘದ ಉದ್ಘಾಟನೆ, ರಾಷ್ಟ್ರೀಯ ಯುವ ಸಪ್ತಾಹ ದಿನಾಚರಣೆ ಹಾಗೂ ಯೋಧ ನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್, ಇತಿಹಾಸ ತಿಳಿದವರು ದೇಶದಲ್ಲಿ ಅತ್ಯುನ್ನತ ಸ್ಥಾನಕ್ಕೇರಿದ್ದಾರೆ. ಆದ್ದರಿಂದ ಯಾರೂ ಇತಿಹಾಸವನ್ನು ತಾತ್ಸಾರ ಮಾಡಬಾರದು. ಜನರ ಮನಸ್ಸಿನಲ್ಲಿ ಸ್ವಾಮಿ ವಿವೇಕಾನಂದರು 139 ವರ್ಷಗಳ ನಂತರವೂ ಉಳಿಯಲು ಅವರು ತೋರಿದ ಸನ್ಮಾರ್ಗವೇ ಕಾರಣವಾಗಿದ್ದು, ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗುವ ಮೂಲಕ ಕುಟುಂಬ ಮತ್ತು ದೇಶಕ್ಕೆ ವಿದ್ಯಾರ್ಥಿಗಳು ಕೀರ್ತಿ ತರಬೇಕೆಂದು ಹೇಳಿದರು.

ಚಿಕ್ಕ ಅಳುವಾರದ ಸ್ನಾತಕೊತ್ತರ ಕೇಂದ್ರದ ಕನ್ನಡ ಉಪನ್ಯಾಸಕ ಜಮೀರ್ ಅಹಮ್ಮದ್ ಮಾತನಾಡಿ, ಭ್ರಷ್ಟಾಚಾರ, ಭಯೋತ್ಪಾದನೆ ಹಾಗು ಕೋಮುಭಾವನೆ ದೇಶಕ್ಕೆ ಮಾರಕ. ಅನಂತ ಉತ್ಸಾಹ, ಸಹನೆ ಮತ್ತು ತಾಳ್ಮೆ ಇದ್ದಲ್ಲಿ ಯಾವುದೇ ಸಾಧನೆ ಮಾಡಲು ಸಾಧ್ಯ ಎಂದರು.

ಸುಂಟಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಶ್ರೀಶಾ ಮಾತನಾಡಿ, ಯೋಧರು ತಮ್ಮ ಜೀವವನ್ನು ಒತ್ತೆ ಇಟ್ಟು ದೇಶ ರಕ್ಷಿಸುತ್ತಿದ್ದಾರೆ. ನಮ್ಮನ್ನು ರಕ್ಷಣೆ ಮಾಡುತ್ತಿರುವ ಸೈನಿಕರಿಗೆ ಗೌರವ ನೀಡಬೇಕು ಎಂದರು.

ಕಾಲೇಜು ಪ್ರಾಂಶುಪಾಲ ಎಚ್.ಎನ್. ರಾಜು ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕ ಎಂ.ಎಸ್. ಶಿವಮೂರ್ತಿ, ಇತಿಹಾಸ ಸಂಘದ ಸಂಚಾಲಕ ಎಂ.ಎಸ್.ಸುನೀಲ್, ಅದ್ಯಕ್ಷ ದಿಲೀಪ್ ಇದ್ದರು. ಕಳೆದ ಬಾರಿಯ ಇತಿಹಾಸ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ತೇಜಸ್ವಿನಿ ಮತ್ತು ಸುಶ್ಮಿತಾ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net