ಇತಿಹಾಸಕಾರರಿಗೆ ಸಾಧಕ ಪ್ರಶಸ್ತಿ ಪ್ರದಾನ

09 MANJU 05
Published on

ಹೊಸಪೇಟೆ: ಕರ್ನಾಟಕ ಇತಿಹಾಸ ಅಕಾಡೆಮಿ ಸಹಯೋಗದಲ್ಲಿ ಕನ್ನಡ ವಿವಿಯಲ್ಲಿ ಶನಿವಾರದಿಂದ ಆರಂಭವಾದ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕ ಇತಿಹಾಸಕಾರರಿಗೆ ಗೌರವಿಸಲಾಯಿತು.

ಬೈಸಾನಿ ರುಕ್ಮಣಮ್ಮ-ರತ್ನಂಶೆಟ್ಟಿ ನೆನಪಿಗಾಗಿ ‘ಇತಿಹಾಸ ಸಂಸ್ಕೃತಿಶ್ರೀ' ಪ್ರಶಸ್ತಿಗೆ ಭಾಜನರಾದ ಶಾಸನ ತಜ್ಞ ಪ್ರೊ.ಕೆ.ಆರ್.ನರಸಿಂಹನ್ ಹಾಗೂ ಜಲ ತಜ್ಞ ಡಾ.ಹರಿಹರ ಶ್ರೀನಿವಾಸರಾವ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ.ಬಾ.ರಾ.ಗೋಪಾಲ್ ಶಾಸನ ದತ್ತಿ ಪ್ರಶಸ್ತಿಗೆ ವಿಜಯಪುರದ ಡಾ.ಎಸ್.ಕೆ.ಕೊಪ್ಪ ಅವರನ್ನು ಪ್ರಶಸ್ತಿ ಪ್ರಧಾನ ಮಾಡಲಾಯಿತು. ನೊಳಂಬಶ್ರೀ ಪ್ರಶಸ್ತಿಗೆ ಬೆಂಗಳೂರಿನ ಡಾ.ಟಿ.ವಿ.ನಾಗರಾಜ, ಸಂಶೋಧನಶ್ರೀ ಪ್ರಶಸ್ತಿಗೆ ಬೆಂಗಳೂರು ಸಂಶೋಧಕ ಆದಪ್ಪ ಪಾಸೋಡಿ, ನಾಯಕಶ್ರೀ ಪ್ರಶಸ್ತಿಗೆ ಮೂಡುಬಿದರೆಯ ಹಿರಿಯ ವಿದ್ವಾಂಸ ಡಾ.ಪುಂಡಿಕ್ಯಾ ಗಣಪಯ್ಯ ಭಟ್, ಸುಮಂಗಲ ಪಾಟೀಲ ಮಹಿಳಾ ಪ್ರಶಸ್ತಿಗೆ ಬೆಂಗಳೂರು ಸಂಶೋಧಕಿ ಡಾ.ಸ್ಮಿತಾರೆಡ್ಡಿ, ಸೂರ್ಯಕೀರ್ತಿ ಪ್ರಶಸ್ತಿಗೆ ನಾಗಮಂಗಲ ಸಂಶೋಧಕ ಮಹಮದ್ ಕಲೀಂಉಲ್ಲ, ಡಾ.ಶ್ರೀನಿವಾಸ ಹಾವನೂರ ಸ್ಮರಣಾರ್ಥ ಪ್ರಶಸ್ತಿಗೆ ಧಾರವಾಡದ ಡಾ.ಮಹೇಶ್ ಕುಮಾರ್ ಹ.ಪಾಟೀಲ, ಡಾ.ಪ್ರತಿಭಾ ಚಿಣ್ಣಪ್ಪ ಸ್ಮರಣಾರ್ಥ ಪ್ರಶಸ್ತಿಗೆ ಬಾಗಲಕೋಟೆಯ ಡಾ.ಯಾದಪ್ಪ ಪರದೇಶಿ ಅವರಿಗೆ ಪ್ರಶಸ್ತಿ ಹಾಗೂ ನಗದು ನೀಡಿ ಗೌರವಿಸಲಾಯಿತು. ಹಾಗೂ ಹುಲ್ಲೂರು ಶ್ರೀನಿವಾಸ ಜೋಯಿಸ ಸ್ಮಾರಕ ಅತ್ಯುತ್ತಮ ಗ್ರಂಥ ಪ್ರಶಸ್ತಿಗೆ ಚಿತ್ರದುರ್ಗದ ಡಾ.ಸಿ.ಎಂ.ತಿಪ್ಪೇಸ್ವಾಮಿರವರ ರಕ್ಕಸದಂಗಡಿ ಕದನ ಗ್ರಂಥವನ್ನು ಹಾಗೂ ಡಾ.ಎಂ.ಎಚ್.ಕೃಷ್ಣ ಮೆರಿಟ್ ಅವಾರ್ಡ್ಗೆ ತುಮಕೂರು ಹಿರಿಯ ವಿಜ್ಞಾನಿ ಬಿ.ಎಸ್.ಸೋಮಶೇಖರ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net