ಇತಿಹಾಸ ಸೇರಲು ಸಾಧನೆ ಮುಖ್ಯ

6
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ

ಒಬ್ಬ ವ್ಯಕ್ತಿ ಇತಿಹಾಸ ಪುಟದಲ್ಲಿ ಉಳಿಯಲು ಆತನ ಸಾಧನೆಯಿಂದ ಸಾಧ್ಯ ಎಂದು ಶಿವಗಂಗೆ ಮೇಲಣಗವಿ ಮಠದ ಡಾ. ಶ್ರೀ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಗರದ ಬಸ್ ನಿಲ್ದಾಣ ಸಮೀಪ ಗಾರ್ಡನ್ ಹೋಟೆಲ್ ಸಭಾಂಗಣದಲ್ಲಿ ಸಮಾನ ಮನಸ್ಕರ ವೇದಿಕೆಯಿಂದ ಗುರುವಾರ ಅಯೋಜಿಸಿದ್ದ ಹಿರಿಯ ಇತಿಹಾಸ ಸಂಶೋಧಕ ದಿವಂಗತ ಡಾ.ಎಚ್.ಎಸ್.ಗೋಪಾಲ್‌ರಾವ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲೋಕವನ್ನು ನಮಗೆ ಕೊಡಬೇಕಾದರೆ ಭಗವಂತ ಸಾಕಷ್ಟು ಕರಾರುಗಳನ್ನು ನೀಡಿದ್ದು ಅವುಗಳನ್ನು ಉತ್ತಮ ರೀತಿ ನಿಭಾಯಿಸಬೇಕಿದೆ. ನಿತ್ಯ ಸಾಕಷ್ಟು ಮಂದಿ ಸಾಯುತ್ತಿದ್ದು, ಹತ್ತಾರು ಮನಸ್ಸಿನಲ್ಲಿ ಸ್ಥಾನಗಳಿಸಿದ್ದ ವ್ಯಕ್ತಿಗೆ ದೈವಾಧೀನರಾದ ಬಳಿಕವೂ ನುಡಿನಮನ ಗೌರವ ಸಿಗುತ್ತದೆ. ಜನರಿಗೆ ಇತಿಹಾಸವನ್ನು ಪರಿಚಯಿಸಿದ ಕೀರ್ತಿ ಡಾ.ಎಚ್.ಎಸ್.ಗೋಪಾಲ್‌ರಾವ್ ಅವರಿಗೆ ಸಲ್ಲುತ್ತದೆ. ಹೀಗಾಗಿ ಗೋಪಾಲ್‌ರಾವ್ ಅವರ ಚಿಂತನೆ, ಸಮಗ್ರ ಸಾಹಿತ್ಯ ಪುಸ್ತಕ ಪ್ರಕಟಣೆಯಾಗಬೇಕಿದೆ ಎಂದರು.

ಸುಧಾ ಮತ್ತು ಮಯೂರ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ, ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಗೀತಾಚಾರ್ಯ, ಸಮಾನ ಮನಸ್ಕರ ವೇದಿಕೆ ಮುಖ್ಯಸ್ಥ ಎನ್.ಜಿ.ಗೋಪಾಲ್, ದಿವಂಗತ ಡಾ.ಎಚ್.ಎಸ್.ಗೋಪಾಲ್‌ರಾವ್ ಅವರ ಪತ್ನಿ ಸೀತಾಲಕ್ಷ್ಮೀ, ಪುತ್ರರಾದ ಬಾಲಸುಬ್ರಹ್ಮಣ್ಯ, ಕಾರ್ತಿಕೇಯಾ, ವಿಶಾಖ, ಸೊಸೆ ಡಾ.ವೇದಾವತಿ, ಜೆ.ಅಮೂಲ್ಯ, ಆರ್ಚಾಯ ಗುರುಪರಂಪರ ವಿದ್ಯಾ ಸಂಸ್ಥೆ ಸಂಸ್ಥಾಪಕ ರಂಗಾಚಾರ್, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎನ್.ರಾಜಶೇಖರ್, ಕಸಾಪ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ್ ಶೆಟ್ಟಿ, ಎಂ.ವಿ.ನೆಗಳೂರು, ಪ್ರದೀಪ್ ಕುಮಾರ್, ಕನ್ನಡ ಸಾಂಸ್ಕೃತಿಕ ರಂಗ ಅಧ್ಯಕ್ಷ ಡಿ.ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಕಾರ್ಯದರ್ಶಿ ಗಿರೀಶ್, ಸಾಹಿತಿ ಡಾ.ಚೌಡಯ್ಯ, ವೆಂಕಟೇಶ್‌ಚೌಥಾಯಿ, ಪ್ರಜಾಕವಿನಾಗರಾಜು, ಬೂದಿಹಾಲ್‌ಕಿಟ್ಟಿ, ಆನಂದ್‌ವೈ.ಮೌರ್ಯ, ಮಾರುತಿ ಶಿವಪ್ರಸಾದ್‌ಆರಾದ್ಯ, ನರಸಿಂಹಯ್ಯ ಉಪಸ್ಥಿತರಿದ್ದರು.

ಸೃಜನಶೀಲ ಕೃತಿ ಬಿಡುಗಡೆ ನುಡಿ ನಮನ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸಮಾನ ಮನಸ್ಕರ ವೇದಿಕೆಯಿಂದ ಸಾಹಿತಿ ಎನ್.ಜಿ.ಗೋಪಾಲ್ ಅವರ ಸಂಪಾದನೆಯ ಸೃಜನಶೀಲ ಶೀರ್ಷಿಕೆಯ ಕೃತಿಯನ್ನು ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಗೀತಾಚಾರ್ಯ ಬಿಡುಗಡೆ ಮಾಡಿದರು. ಗಾಯಕ ಚಿಕ್ಕಮಾರನಹಳ್ಳಿ ಸಿದ್ದಯ್ಯ ಗೀತಗಾಯನ ನೆರವೇರಿಸಿಕೊಟ್ಟರು.

ತಾಲೂಕಿನ ಇತಿಹಾಸವನ್ನು ರಾಜ್ಯಕ್ಕೆ ಪರಿಚಯಿದ್ದ ಮಹಾನ್‌ಚೇತನ ಕಣ್ಮರೆಯಾಗಿರುವುದು ನೋವಿನ ಸಂಗತಿ. ಡಾ.ಎಚ್.ಎಸ್.ಗೋಪಾಲ್‌ರಾವ್ ಅವರು ದೈಹಿಕವಾಗಿ ನಮ್ಮಿಂದ ದೂರವಾದರೂ ಮಾನಸಿಕವಾಗಿ ಸದಾ ಇರುತ್ತಾರೆ. ಅವರ ಅಗಲಿಕೆ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾಗದ ನಷ್ಟ. ಪೂರ್ಣಿಮಾ ಸುಗ್ಗರಾಜು ನಗರಸಭೆ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net