

ಬಾಗಲಕೋಟೆ: ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ಮೂರು ವರ್ಷದಿಂದ ಸಾಂಕೇತಿಕವಾಗಿದ್ದ ಗಣೇಶೋತ್ಸವ, ಪ್ರಸಕ್ತ ವರ್ಷ ವಿಜೃಂಭಣೆಯಿಂದ ಜರುಗಿತು. ಅದರಲ್ಲೂ ಮುಳಗಡೆ ನಗರಿಯಲ್ಲಿ ಸ್ಥಾಪಿಸಿದ್ದ 100 ಕ್ಕೂ ಸಾರ್ವಜನಿಕ ಗಣೇಶ ಉತ್ಸವ ಸಮಿತಿಗಳಿಗೆ ಉದ್ಯಮಿಯೊಬ್ಬರು ಮಾಡಿದ ಸೇವಾ ಕಾರ್ಯ ಮಾದರಿಯಾಗಿತ್ತು.
ಬಾಗಲಕೋಟೆ ನಗರದ ಉದ್ಯಮಿ ಮಲ್ಲಿಕಾರ್ಜುನ ಚರಂತಿಮಠ ವಿದ್ಯಾಗಿರಿ, ನವನಗರ, ಹಳೇ ಬಾಗಲಕೋಟೆ ನಗರದಲ್ಲಿ ವಿವಿಧ ಆಚರಣಾ ಸಮಿತಿಗಳು ಗಲ್ಲಿ ಗಲ್ಲಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶ ಮೂರ್ತಿಗಳ ದರ್ಶನ ಪಡೆದು ನಾಡಿಗೆ ಉತ್ತಮ ಮಳೆ- ಬೆಳೆ, ಸಮೃದ್ಧಿ ನೀಡಲಿ ಅಂತ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ ಪ್ರತಿ ಸಮಿತಿಗಳಿಗೆ ತಲಾ 5 ರೂ. ದಂತೆ 7 ಲಕ್ಷ ರೂ. ಹೆಚ್ಚು ಹಣ ಸೇವಾರ್ಥವಾಗಿ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರತಿ ಮಂಡಳಿಗಳು ಕೂಡಾ ಮಲ್ಲಿಕಾರ್ಜುನ ಚರಂತಿಮಠ ಅವರಿಗೆ ಸನ್ಮಾನಿಸಿ ಶುಭ ಹಾರೈಸಿದವು. ಇದೇ ಮೊದಲ ಬಾರಿಗೆ ಬಾಗಲಕೋಟೆ ನಗರದಲ್ಲಿ ಗಣೇಶ ಉತ್ಸವಕ್ಕೆ ಸೇವಾ ಕಾರ್ಯ ನೆರವೇರಿಸಿದ ಮಲ್ಲಿಕಾರ್ಜುನ ಚರಂತಿಮಠ ಹೊಸ ಇತಿಹಾಸ ಸೃಷ್ಟಿಸಿ, ಪರಂಪರೆ ಸಾಕ್ಷಿಕರಿಸಿದರು.
ಬಾಗಲಕೋಟೆ ನಗರದ ಗಜಾನನ ಉತ್ಸವ ಸಮಿತಿಗಳ ಮಹಾಮಂಡಳದ ಮಹಾಮಂಡಳ ಅಧ್ಯಕ್ಷ ಬಸವಪ್ರಭು ಸರನಾಡಗೌಡ, ಉಪಾಧ್ಯಕ್ಷ ಬಸವರಾಜ ಕಟಗೇರಿ, ಕಾರ್ಯದರ್ಶಿ ಕಳಕಪ್ಪ ಬಾದೋಡಗಿ, ಅಶೋಕ ಮುತ್ತಿನಮಠ, ಸಂಘಟನಾ ಕಾರ್ಯದರ್ಶಿ ಶಿವು ಮೇಲ್ನಾಡ, ಸದಸ್ಯರಾದ ಸಂಜಯ ಮಹಿಂದ್ರಕರ, ರವಿ ಪೇಟಕರ, ವಿಜಯ ಸುಲಾಖೆ, ಅಶೋಕ ಮಹಿಂದ್ರಕರ, ವಿನಾಯಕ ಹಾಸಲಕರ,ರಾಜು ಬಾಸುತಕರ ಅವರು ಮಲ್ಲಿಕಾರ್ಜುನ ಚರಂತಿಮಠ ಅವರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿ ಇಂತಹ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳು ಸ್ಪೂರ್ತಿ ನೀಡುತ್ತವೆ ಎಂದು ತಿಳಿಸಿದ್ದಾರೆ.