ಇತಿಹಾಸ ಸಾರುವ ಗೀತೆಗಳ ಗಾಯನ

1.ktal.01
Published on

ಕವಿತಾಳ: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಮಾನಪ್ಪ ಶಿಲ್ಪಿ ಅವರಿಂದ ನಿರ್ಮಾಣವಾದ ನಾಡ ದೇವಿ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಮೆರವಣಿಗೆಯಲ್ಲಿ ಕರ್ನಾಟಕದ ಇತಿಹಾಸವನ್ನು ಸಾರುವ ಪದಗಳನ್ನು ಹಾಡಲಾಯಿತು. ಸರ್ಕಾರಿ ಕನ್ಯಾ ಪ್ರೌಢಶಾಲೆವರೆಗೆ ಮೆರವಣಿಗೆ ನಡೆಯಿತು. ಪಟ್ಟಣ ಪಂಚಾಯಿತಿ, ಪೊಲೀಸ್ ಠಾಣೆ ಸೇರಿದಂತೆ ವಿವಿಧೆಡೆ ರಾಜ್ಯೋತ್ಸವ ಆಚರಿಸಲಾಯಿತು. ಕರವೇ ಸ್ಥಳೀಯ ಘಟಕದ ಅಧ್ಯಕ್ಷ ಸಂತೋಷ ಕಲಾಶೆಟ್ಟಿ, ಪ್ರಮುಖರಾದ ದುರಗೇಶ ಯಡಿವಾಳ, ಸಿದ್ದಪ್ಪ ದಿನ್ನಿ, ಸುನೀಲ್, ಅಮರೇಶ, ಓವಣ್ಣ, ಚಾಂದ್ ಪಾಷಾ, ಮೌನೇಶ ಪಟಕನದೊಡ್ಡಿ, ಮಲ್ಲೇಶ ನಾರಬಂಡಿ, ಭೀಮಣ್ಣ ಕಾಚಾಪೂರ, ರಾಘವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net