

ಚಿತ್ರದುರ್ಗ:ಇತಿಹಾಸ ತಜ್ಞ, ಸಂಶೋಧಕ,ನಗರದ ದೊಡ್ಡಪೇಟೆ ನಿವಾಸಿ ಪ್ರೊ.ಎಚ್.ಶ್ರೀಶೈಲಆರಾಧ್ಯ(78)ಅವರು ಗುರುವಾರ ಬೆಳಗ್ಗೆ ನಿಧನ ಹೊಂದಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಮೃತರ ನಿವಾಸ ‘ಸಿರಿಸಂಪದ’ದಲ್ಲಿ ಸಾರ್ವಜನಿಕ ದರ್ಶನದ ಬಳಿಕ, ಶುಕ್ರವಾರ 11.30ಕ್ಕೆ ಜೋಗಿಮಟ್ಟಿ ರಸ್ತೆ ವೀರಶೈವ-ಲಿಂಗಾಯತ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ಜರುಗಲಿದೆ.
ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಅವರು, ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೊಸದುರ್ಗ ತಾಲೂಕು ಸೋಮೇನಹಳ್ಳಿಯಲ್ಲಿ ಜೆ.ಹಾಲಾರಾಧ್ಯ ಮತ್ತು ಮರಳಮ್ಮ ದಂಪತಿಯ ಹಿರಿಯ ಮಗನಾಗಿದ್ದ 1946ರಲ್ಲಿ ಜನಿಸಿದ್ದ ಆರಾಧ್ಯರು,ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ,ಸಮೀಪದ ಬೂದಿಹಾಳ್‌ನಲ್ಲಿ ಮಾಧ್ಯಮಿಕ, ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದರು.
ತುಮಕೂರು,ಧಾರವಾಡದಲ್ಲಿ ಪದವಿ ಪೂರ್ವ,ಪದವಿ,ಸ್ನಾತಕೋತ್ತರ ಪದವಿಯ ಬಳಿಕ ಶಿವಮೊಗ್ಗ,ಚಿಕ್ಕಮಗಳೂರು ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಆರಾಧ್ಯರು ಸೇವೆ ಸಲ್ಲಿಸಿದ್ದಾರೆ.
ಜಾನಪದ ಕ್ಷೇತ್ರದಲ್ಲೂ ಗಣನೀಯ ಸೇವೆಗೈದಿರುವ, ಸಾಹಿತ್ಯವಿಮರ್ಶಕರೂ ಆಗಿದ್ದ ಶ್ರೀಶೈಲಾಆರಾಧ್ಯರ ನಿಧನಕ್ಕೆ ನಿರಂಜನ ಕರ್ನಾಟಕ ಜಾನಪದ ಪರಿ ಷತ್ ಜಿಲ್ಲಾ ಘಟಕ ಸಂತಾಪ ಸೂಚಿಸುತ್ತದೆ ಎಂದು ಘಟಕದ ಪ್ರಮುಖ ನಿರಂಜನ ದೇವರಮನಿ ತಿಳಿಸಿದ್ದಾರೆ. ಚಿತ್ರದುರ್ಗದ ಗುಹಾ ಚಿತ್ರಗಳನ್ನು ಮತ್ತು ಕೋಟೆ ಬಂಡೆಗಳ ಮೇಲಿದ್ದ ರೇಖಾ ಚಿತ್ರಗಳನ್ನಾಧರಿಸಿ ಶಿಲಾಯುಗದ ಕುರುಹು ಸಂಶೋ ಧಿಸಿದ್ದ ಆರಾಧ್ಯರ ನಿಧನ ತುಂಬಲಾರದ ನಷ್ಟ ವಾಗಿದೆ ಎಂದು ಕೋಟೆ ಮಾರ್ಗದರ್ಶಿ ಬಿ.ಮೊಹಿದ್ದೀನ್‌ಖಾನ್ ಸಂತಾಪ ಸೂಚಿಸಿದ್ದಾರೆ.