

ನಾಪೋಕ್ಲು: ಪಾಡಿ ಶ್ರೀ ಇಗ್ಗುತಪ್ಪ ಭಕ್ತ ಜನಸಂಘ ಆರಂಭಗೊಂಡು ನೂರು ವರ್ಷ ತುಂಬಿದ ನೆನಪಿಗಾಗಿ ದಾನಿಗಳು ನೀಡಿದ ಹಣದಲ್ಲಿ ವಿವಿಧ ಕಟ್ಟಡ ನಿರ್ಮಿಸಲಾಗಿದೆ ಎಂದು ಭಕ್ತ ಜನಸಂಘದ ಅಧ್ಯಕ್ಷ ಕಾಂಡಟಡ ಜೋಯಪ್ಪ ಹೇಳಿದರು.
ಸಂಘದ ವತಿಯಿಂದ ಸುಮಾರು 38 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಭೋಜನ ಗೃಹವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶತಮಾನೋತ್ಸವದ ನೆನಪಿಗಾಗಿ ಭೋಜನಗೃಹ, ಸಂಘದ ಕಚೇರಿ, ಕೈ ತೊಳೆಯುವ ಹಜಾರವನ್ನು ನಿರ್ಮಾಣ ಮಾಡಲಾಗಿದೆ. ದೇವರ ಅಭಿಷೇಕಕ್ಕಾಗಿ ಎರಡು ಬೆಳ್ಳಿಯ ಬಿಂದಿಗೆಗಳನ್ನು ದೇವಾಲಯಕ್ಕೆ ಅರ್ಪಿಸಲಾಯಿತು. ದೇವಾಲಯಕ್ಕೆ ಪ್ರತ್ಯೇಕವಾಗಿ ನೀಡಿದ ಟ್ರಾನ್ಸ್‌ಫಾರ್ಮರ್ ಅನ್ನು ಸೆಸ್ಕ್ ಕಿರಿಯ ಇಂಜಿನಿಯರ್ ಹರೀಶ್ ಉದ್ಘಾಟಿಸಿದರು.
ಭಕ್ತ ಜನ ಸಂಘದ ಉಪಾಧ್ಯಕ್ಷ ಪರದಂಡ ಡಾಲಿ, ಪ್ರಧಾನ ಕಾರ್ಯದರ್ಶಿ ಬೊಳಂದಂಡ ಲಲಿತ ನಂದಕುಮಾರ್, ಖಜಾಂಚಿ ನಂಬಡಮಂಡ ಸುಬ್ರಮಣಿ, ನಿರ್ದೇಶಕರಾದ ಕಲಿಯಂಡ ಹ್ಯಾರಿಮಂದಣ್ಣ, ಡಾಕ್ಟರ್ ಸಣ್ಣುವಂಡ ಕಾವೇರಪ್ಪ, ಕಲ್ಯಾಟಂಡ ಮುತ್ತಪ್ಪ, ಪರದಂಡ ಸುಬ್ರಮಣಿ ಕಾವೇರಪ್ಪ, ಕೋಡಿಮಣಿಯಂಡ ಸುರೇಶ್, ಬಾಚಮಂಡ ಲವಚಿಣಪ್ಪ ,ಬಡಕಡ ಸುರೇಶ್, ಕಲಿಯಂಡ ಸುನಂದ ಉದಿಯಂಡ ಸುರನಾಣಯ್ಯ, ನಾಟೋದಂಡ ದಿಲೀಪ್, ಪಾಂಡಂಡ ನರೇಶ್, ಪಾರುಪತ್ತೆಗಾರ ಪರದಂಡ ಪ್ರಿನ್ಸ್‌ತಮ್ಮಪ್ಪ, ಕಾರ್ಯನಿರ್ವಾಹಕರಾದ ಕಂಬೆಯಂಡ ಬಳ್ಳಿಯಪ್ಪ, ಕಂಬೆಯಂಡ ಗಣೇಶ್, ಅರ್ಚಕ ಕುಶಭಟ್, ಜಗದೀಶ್, ಹಾಗೂ ಶ್ರೀನಿವಾಸ್, ಶ್ರೀಕಾಂತ್ ಹೆಬ್ಬಾರ್ ಇತರರು ಇದ್ದರು.