ಇಇ ವರ್ಗಾವಣೆ ರದ್ದುಗೊಳಿಸಿ

karave-1
Published on

ಬೀದರ್: ಲೋಕೋಪಯೋಗಿ ಇಲಾಖೆ ಬೀದರ್ ಇಇ ಪಿ.ಆರ್. ಪ್ರಶಾಂತ ಅವರ ವರ್ಗಾವಣೆ ರದ್ದುಪಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಪೀಟರ್ ಚಿಟಗುಪ್ಪ ಆಗ್ರಹಿಸಿದ್ದಾರೆ.

ಈ ಕುರಿತು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿ, ವಿನಾಕಾರಣ ಇವರಿಗೆ ದಿಢೀರ್ ವರ್ಗ ಮಾಡಿರುವುದು ಖಂಡನೀಯ. ಕರೊನಾ ಹಿನ್ನೆಲೆಯಲ್ಲಿ ಕಳೆದ 10 ತಿಂಗಳಿಂದ ವಿವಿಧ ಕಾಮಗಾರಿ ಸ್ಥಗಿತಗೊಂಡಿದ್ದು, ಇದೀಗ ಆರಂಭಿಸಲಾಗಿದೆ. ಇಂಥದರಲ್ಲಿ ಇಇ ವರ್ಗಾವಣೆ ಸರಿಯಲ್ಲ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net