ವಿಶೇಷ ವರದಿ ತುಮಕೂರು
ಮಹಾನಗರ ಪಾಲಿಕೆಯಲ್ಲಿ ತಾಂತ್ರಿಕ ದೋಷದಿಂದ ಇ&ಆಸ್ತಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಕಳೆದ 3&4 ತಿಂಗಳಿನಿಂದ ಇ&ಖಾತೆಗಾಗಿ ಪರದಾಡುತ್ತಿರುವ ಜನರು ಇನ್ನಷ್ಟು ಹೈರಣಾಗಿ ಹೋಗಿದ್ದಾರೆ.
ಇ-&ಆಸ್ತಿಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳು ಹಾಗೂ ಅಧಿಕಾರಿಗಳ ರ್ನಿಲಕ್ಷ್ಯ ಹಾಗೂ ಅಸಮರ್ಪಕತೆಗೆ ತುಮಕೂರಿನ ಜನರು ರೋಸಿಹೋಗಿದ್ದಾರೆ. ಆಸ್ತಿ ಮಾರಾಟ, ಸಾಲ ಪಡೆಯಲು ಹಾಗೂ ಇತರ ಆಸ್ತಿ ನೋಂದಣಿ ಪ್ರಕ್ರಿಯೆಗಳಿಗೆ ಇ&ಖಾತಾ ಅಗತ್ಯವಿದ್ದು, ತುಮಕೂರು ಮಹಾನಗರ ಪಾಲಿಕೆಯಲ್ಲಿ ಕಳೆದ 3&4 ತಿಂಗಳಿಂದ ಇ&ಆಸ್ತಿಗಾಗಿ ಜನ ಪ್ರತಿನಿತ್ಯ ಎಡತಾಕುವಂತಾಗಿದೆ.
ಸುಧಾರಣೆ ಕ್ರಮ ಇಲ್ಲ: ಇಷ್ಟೆಲ್ಲಾ ದೂರುಗಳ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದಷ್ಟೇ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ದೀಪಾ ಚೋಳನ್ ಸಹ ಪಾಲಿಕೆಗೆ ಭೇಟಿ ನೀಡಿ ಇ&ಖಾತಾ ಪ್ರಕ್ರಿಯೆ ಮಾಹಿತಿ ಪಡೆದು ಜನರಿಗೆ ಅನಾನುಕೂಲವಾಗದಂತೆ ಸುಧಾರಣೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದ್ದರು. ಉಸ್ತುವಾರಿ ಕಾರ್ಯದರ್ಶಿ ಬಂದು ಹೋದ ಬಳಿಕವೇ ಕಂದಾಯ ಶಾಖೆಯ ಬಾಗಿಲಿಗೆ "ತಾಂತ್ರಿಕ ದೋಷದಿಂದ ಇ&ಆಸ್ತಿ ಕಾರ್ಯವು ಸ್ಥಗಿತಗೊಂಡಿದೆ' ಎಂದು ಅಂಟಿಸಲಾಗಿದೆ.
20 ಸಾವಿರ ಕೊಟ್ಟರೆ 3 ದಿನಗಳಲ್ಲೇ ಇ&ಖಾತಾ!: ಇ&ಖಾತಾಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ 3&4 ತಿಂಗಳಾದರೂ ಪಾಲಿಕೆಗೆ ಅಲೆಯಬೇಕು. 20 ಸಾವಿರ ರೂಪಾಯಿ ಕೊಟ್ಟರೆ 3&4 ದಿನಗಳಲ್ಲೇ ಇ&ಖಾತಾ ನಿಮ್ಮ ಕೈ ಸೇರಲಿದೆ. ಈ ಪವಾಡವು ಕಣ್ ಕಟ್ಟಿನಂತೆ ಪಾಲಿಕೆಯಲ್ಲಿ ನಡೆಯುತ್ತಿದೆ. ಏನೆಲ್ಲಾ ಸುಧಾರಣೆ ಕ್ರಮಗಳನ್ನು ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಕೈಗೊಂಡರೂ ರಂಗೋಲಿ ಕೆಳಗೆ ತೂರಿ ಕಂದಾಯ ಶಾಖೆ ಸಿಬ್ಬಂದಿ ಕೈಚಳಕ ತೋರುತ್ತಾರೆ. ಪ್ರಭಾವಿಗಳು, ದುಡ್ಡಿದ್ದವರಿಗೆ ಇ&ಖಾತಾ ಬೇಗ ಸಿಗಲಿದೆ ಎಂದು ಸಾಮಾನ್ಯ ಜನರು ಹಿಡಿಶಾಪ ಹಾಕುತ್ತಾರೆ.
3 ವಲಯಗಳ ವಿಂಗಡಣೆ: 35 ವಾರ್ಡ್ಗಳನ್ನು ಹೊಂದಿರುವ ತುಮಕೂರು ಮಹಾನಗರ ಪಾಲಿಕೆಯಲ್ಲಿ 1 ಲಕ್ಷ 22 ಸಾವಿರ ಆಸ್ತಿಗಳಿವೆ. ಇವುಗಳ ಇ&ಖಾತಾ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಈಗಾಗಲೇ ಪಾಲಿಕೆಯಲ್ಲಿರುವ ಅಗತ್ಯ ದಾಖಲೆಗಳನ್ನಿಟ್ಟುಕೊಂಡೇ ಇ&ಆಸ್ತಿ ತೆರೆಯಬಹುದು. ಆದರೆ, ತುಮಕೂರು ಪಾಲಿಕೆಯಲ್ಲಿ ಇ&ಖಾತೆಗೆ ಅರ್ಜಿ ಸಲ್ಲಿಸಿ 3&4 ತಿಂಗಳುಗಳಾದರೂ ಸಿಗುತ್ತಿಲ್ಲ. ಹಾಗಾಗಿ, ಮೂರು ವಲಯಗಳನ್ನು ವಿಂಗಡಿಸಿ ವಾರ್ಡ್ಗಳನ್ನು ಹಂಚಲಾಗಿದೆ. ಪ್ರತಿ ವಲಯಕ್ಕೆ ವಲಯ ಆಯುಕ್ತರು, ಆರ್ಐ, ಕೇಸ್ವರ್ಕರ್, ಆರ್ಒಗಳನ್ನು ನೇಮಿಸಲಾಗಿದೆ. ಇಷ್ಟಾದರೂ ಜನರ ಪರದಾಟ ತಪ್ಪಿಲ್ಲ.
ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯಲ್ಲಿ 2&3 ದಿನಗಳಲ್ಲೇ ಇ&ಖಾತಾ ಕೊಡುತ್ತಾರೆ. ತುಮಕೂರು ಪಾಲಿಕೆಯಲ್ಲಿ 20 ಸಾವಿರ ಕೊಟ್ಟರೆ 3 ದಿನಗಳಲ್ಲಿ ಇ&ಖಾತಾ ನಿಮ್ಮ ಕೈ ಸೇರುತ್ತದೆ. ಇಲ್ಲವಾದಲ್ಲಿ 3&4 ತಿಂಗಳಾದರೂ ಅಲೆದಾಡಿಸುತ್ತಾರೆ. 2016ರ ಸುತ್ತೋಲೆ ಪ್ರಕಾರ ಪಾಲಿಕೆಯಲ್ಲಿರುವ ರಿಜಿಸ್ಟ್ರರ್ ದಾಖಲೆಗಳನ್ನಿಟ್ಟುಕೊಂಡೇ ಇ&ಖಾತಾ ಮಾಡಿಕೊಡಬಹುದು. ಆದರೆ, ಅನಗತ್ಯವಾಗಿ ದಾಖಲೆಗಳನ್ನು ತರುವಂತೆ ಅಲೆದಾಡಿಸಿ ಜನರನ್ನು ಹೈರಾಣಾಗಿಸುತ್ತಾರೆ.
| ಇಮ್ರಾನ್ ಪಾಷಾ ಸಾಮಾಜಿಕ ಹೋರಾಟಗಾರ
ಇ&-ಆಸ್ತಿಗೆ ಸಂಬಂಧಿಸಿದಂತೆ ಅನೇಕ ದಾಖಲಾತಿಗಳಿಗೆ ಸಾರ್ವಜನಿಕರನ್ನು ಅಲೆಸುವುದು ಸಲ್ಲದು. ನಮೂನೆ-&3 ನೀಡುವಾಗ ಈಗಾಗಲೇ ಎಲ್ಲ ದಾಖಲಾತಿಗಳನ್ನು ಖಾತಾದಾರರು ನೀಡಿರುತ್ತಾರೆ. ಅದನ್ನು ಪುನ@ ಕೇಳಿ ಅಲೆಸುವ ಅಗತ್ಯವಿಲ್ಲ. ನಮೂನೆ-&3 ರ ಆಧಾರದ ಮೇಲೆ ಇ-&ಆಸ್ತಿ ತೆರೆಯಬೇಕು.
| ಎಚ್.ಎಸ್.ರವಿಶಂಕರ್ ಬಿಜೆಪಿ ಜಿಲ್ಲಾಧ್ಯಕ್ಷ