ಇಂಧನ ದರ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ

CTD BJP 00000
Published on


ಚಿತ್ರದುರ್ಗ:ಇಂಧನ ದರ ಏರಿಕೆ ವಿರೋಧಿಸಿ ಚಿತ್ರದುರ್ಗದಲ್ಲಿ ಸೋಮವಾರ ಬಿಜೆಪಿ ಕಾರ‌್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ವೀರ ವನಿತೆ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟಿಸಿದ ಕಾರ‌್ಯಕರ್ತರು, ಲೋಕಸಭಾ ಚುನಾವಣೆ ಸೋಲಿನ ಹತಾಶೆಯಲ್ಲಿ ಪೆಟ್ರೋಲ್,ಡಿಸೇಲ್ ದರವನ್ನು ಹೆಚ್ಚಿಸುವ ಮೂಲಕ ಸೇಡಿನ ರಾಜಕಾರಣಕ್ಕೆ ಮುಂದಾಗಿದೆ. ಇಂಧನ ದರ ಏರಿಕೆಯಿಂದ ನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತವೆ. ಗ್ಯಾರಂಟಿಗಳ ಹೊರೆ ಸರಿದೂಗಿಸಲು ರಾಜ್ಯಸರ್ಕಾರ ಸರ್ಕಸ್ ನಡೆಸಿದೆ. ಆರ್ಥಿಕವಾಗಿ ದಿವಾಳಿ ಆಗಿರುವ ಈ ಸರ್ಕಾರ ಇಂಧನ ದರ ಹೆಚ್ಚಿಸುವ ಮೂಲಕ ಜನ ಸಾಮಾನ್ಯರನ್ನು ಸಂಕಷ್ಟಕ್ಕೆ ನೂಕಿದೆ ಎಂದು ಕಾರ‌್ಯಕರ್ತರು ರಾಜ್ಯಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕುಡಾ ಮಾಜಿ ಅಧ್ಯಕ್ಷ ಸುರೇಶ್ ಸಿದ್ದಾಪುರ,ನವೀನ್‌ಚಾಲುಕ್ಯ,ವೆಂಕಟೇಶ್‌ಯಾದವ್,ನಾಗರಾಜಬೇದ್ರೆ,ಶಿವಪ್ರಕಾಶ್ ದಗ್ಗೆ,ವೀಣಾ,ಬಸಮ್ಮ,ಶೈಲಜಾ ರೆಡ್ಡಿ,ಶ್ಯಾಮಲಾ ಶಿವಪ್ರಕಾಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net