ಇಂದ್ರ ಧನುಷ್ ಯಶಸ್ವಿಗೆ ೫೪೪ ಲಸಿಕಾ ತಂಡಗಳ ರಚನೆ

Published on

ಕಲಬುರಗಿ
ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನ ಯಶಸ್ವಿಗೊಳಿಸಲು ಕಲಬುರಗಿ ಜಿಲ್ಲೆಯಲ್ಲಿ ೫೪೪ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಆರ್‌ಸಿಹೆಚ್ ಅಧಿಕಾರಿ ಶರಣಬಸಪ್ಪ ಖ್ಯಾತನಾಳ ತಿಳಿಸಿದರು. ಇಂದ್ರ ಧನುಷ್ ೫.೦ ಕಾರ್ಯಕ್ರಮ ದೇಶದಾದ್ಯಂತ ಕರ್ನಾಟಕ ೩೧ ಜಿಲ್ಲೆಗಳಲ್ಲಿ  ಕೈಗೆತ್ತಿಲಾಗುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು  ೨೯,೦೦೨೮೯ ಜನಸಂಖ್ಯೆ ಇದ್ದು. ಈ ಕಾರ್ಯಕ್ರಮದಲ್ಲಿ ೨,೬೩೫ ಅರ್ಹ ಗರ್ಭಿಣಿಯರು, ೨ ವರ್ಷದೊಳಗಿನ ಅರ್ಹ ಮಕ್ಕಳು ೧೦,೦೬೮ ಹಾಗೂ ೨ ರಿಂದ ೫ ವರ್ಷದೊಳಗಿನ ಅರ್ಹ ಮಕ್ಕಳು ೨,೫೮೪ ಫಲಾನುಭವಿಗಳಿಗೆ ಲಸಿಕೆ ನೀಡಲಾಗುತ್ತದೆ. ಅದಕ್ಕಾಗಿ ೫೪೪ ಲಸಿಕಾ ತಂಡಗಳು, ೮೭ ಸಂಚಾರಿ ತಂಡಗಳು ಹಾಗೂ ೧೫೩೮ ಲಸಿಕಾ  ಸ್ಥಳಗಳನ್ನು ಗುರುಸಿಸಲಾಗಿದೆ, ೧೦೮೮ ಲಸಿಕಾ ತಂಡದ ಸಿಬ್ಬಂದಿ ಹಾಗೂ ೨೧೭ ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ  ಎಂದರು,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net