ಇಂದು ಸೆಮಿಸ್ ಹಣಾಹಣಿ

4 gkp 01
Published on

ಪೊನ್ನಂಪೇಟೆ: ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ಕೊಡವ ಹಾಕಿ ಅಕಾಡೆಮಿಯಿಂದ ನಡೆಯುತ್ತಿರುವ ಪಾಂಡಂಡ ಎಂ.ಕುಟ್ಟಪ್ಪ ಜ್ಞಾಪಕಾರ್ಥ ಕೊಡವ ಕೌಟುಂಬಿಕ ರಿಂಕ್ ಹಾಕಿ 16 ಘಟಕ್ಕೆ ತಲುಪಿದ್ದು, ಶನಿವಾರ ಸೆಮಿ ಫೈನಲ್‌ನಲ್ಲಿ ಜಯ ಸಾಧಿಸಿದ ತಂಡಗಳು ಭಾನುವಾರ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.


ಪರದಂಡ, ಮಾತಂಡ, ಮಚ್ಚಂಡ, ಮಂಡೇಪಂಡ, ಕುಲ್ಲೇಟಿರ, ಚೆಪ್ಪುಡೀರ, ಪೆಮ್ಮಂಡ, ಚೇಂದಂಡ, ಕುಪ್ಪಂಡ (ಕೈಕೇರಿ), ಚೆಕ್ಕೇರ, ಚೇನಂಡ, ಮಾರ್ಚಂಡ, ಕಲಿಯಂಡ, ಸೋಮೆಯಂಡ, ಕಡೇಮಡ ಹಾಗೂ ನೆಲ್ಲಮಕ್ಕಡ ತಂಡಗಳು ಶನಿವಾರ ಮುಖಾಮುಖಿಯಾಗಲಿವೆ.
ಫಲಿತಾಂಶ: ಮೇಕೇರಿರ ತಂಡ ದೇಯಂಡವನ್ನು 11-5 ಗೋಲುಗಳಿಂದ ಮಣಿಸಿತು. ಮೇಕೇರಿರ ನೆಹಾಲ್ 9, ದೇಯಂಡ ಸಂಜು 4 ಗೋಲು ಹೊಡೆದರು. ಮೇಕೇರಿರ ನವೀನ್, ರೋನಕ್ ದೇಯಂಡ ಯಶಿಕ್ ತಲಾ ಒಂದೊಂದು ಗೋಲುಗಳ ಕಾಣಿಕೆ ನೀಡಿದರು.


ಮಾರ್ಚಂಡಕ್ಕೆ ಶಾಂತೇಯಂಡ ವಿರುದ್ಧ 12-4 ಗೋಲುಗಳ ಜಯ ಲಭಿಸಿತು. ಮಾರ್ಚಂಡ ನಾಚಪ್ಪ 5, ಸುಬ್ರಮಣಿ 4, ಪಳಂಗಪ್ಪ 3, ಶಾಂತೇಯಂಡ ವಿಕಾಸ್, ತನೀಶ್, ಉತ್ತಪ್ಪ, ತಿಮ್ಮಯ್ಯ ಒಂದೊಂದು ಗೋಲು ಹೊಡೆದರು. ಕೋಟೇರವು ಅಪ್ಪಂಡೇರಂಡವನ್ನು 11-6 ಗೋಲುಗಳಿಂದ ಸೋಲಿಸಿತು. ಕೋಟೇರ ಕೌಶಿಕ್ 6, ದಿಲಿಪ್ 3, ಭರತ್, ನಾಣಯ್ಯ ತಲಾ 1, ಅಪ್ಪಂಡೇರಂಡ ಬೊಪ್ನಣ ಮತ್ತು ಪೂವಯ್ಯ ತಲಾ 3 ಗೋಲುಗಳು ಹೊಡೆದು ಸೋಲಿನ ಅಂತರ ತಗ್ಗಿಸಿದರು. ಸೋಮೆಯಂಡಕ್ಕೆ ಮಚ್ಚಾರಂಡ ವಿರುದ್ಧ 10-3 ಗೋಲುಗಳ ಗೆಲುವು ದೊರೆಯಿತು. ಸೋಮೆಯಂಡ ಅಪ್ಪಚ್ಚು 6, ವಚನ್ 3, ಪ್ರಯಾಗ್ 1, ಮಚ್ಚಾರಂಡ ಗಗನ್ 3 ಗೋಲು ದಾಖಲಿಸಿದರು.


ಇಟ್ಟೀರವು ಪೊನ್ನೋಲತಂಡವನ್ನು 9-2 ಗೋಲುಗಳಿಂದ ಮಣಿಸಿತು. ಇಟ್ಟೀರ ಅಚ್ಚಯ್ಯ 5, ಅಚ್ಚಪ್ಪ 3, ಕುಟ್ಟಪ್ಪ 1, ಪೊನ್ನೋಲತಂಡ ನಾಣಯ್ಯ, ಅಶ್ವತ್ ತಲಾ ಒಂದೊಂದು ಗೋಲು ಬಾರಿಸಿದರು. ಪೊರುಕೊಂಡವು ಪಾಂಡಂಡವನ್ನು 4-3 ಗೋಲುಗಳಿಂದ ಸೋಲಿಸಿತು. ಪೊರುಕೊಂಡ ಅನಿಲ್ 3, ಲವ 1, ಪಾಂಡಂಡ ಕಾರ್ಲ್ 2, ಅಯ್ಯ್ಪಪ 1 ಗೋಲು ಹೊಡೆದರು.


ಕಡೇಮಡವು ಮುಕ್ಕಾಟೀರ (ಪುಲಿಕೋಟ್) ವಿರುದ್ಧ 8-4 ಗೋಲುಗಳ ಅಂತರದಲ್ಲಿ ಜಯಿಸಿತು. ಕಡೇಮಡ ಚರ್ಮಣ 4, ಕಾವೇರಪ್ಪ 3, ಕುಶಾಲಪ್ಪ 1, ಮುಕ್ಕಾಟೀರ ಮುತ್ತಪ್ಪ 3, ಕಾಳಪ್ಪ 1 ಗೋಲು ಹೊಡೆದರು.
ನೆಲ್ಲಮಕ್ಕಡವು ಪುಚ್ಚಿಮಂಡವನ್ನು 8-3 ಗೋಲುಗಳಿಂದ ಸೋಲಿಸಿತು. ನೆಲ್ಲಮ್ಕಕಡ ಪೂವಣ್ಣ, ಸೋಮಯ್ಯ ತಲಾ 2, ಸಚಿನ್, ಅಯ್ಯಪ್ಪ, ಮೊಣ್ಣಪ್ಪ, ಅಪ್ಪಣ್ಣ, ಪುಚ್ಚಿಮಂಡ ಅಯ್ಯಪ್ಪ, ಭವನ್, ಯಶ್ವಿನ್ ತಲಾ ಒಂದೊಂದು ಗೋಲು ದಾಖಲಿಸಿದರು.


ಮಾರ್ಚಂಡಕ್ಕೆ ಮೇಕೇರಿರ ವಿರುದ್ಧ 4-2 ಗೋಲುಗಳ ಜಯ ದೊರೆಯಿತು. ಮಾರ್ಚಂಡ ನಾಚಪ್ಪ 2, ಸುಬ್ರಮಣಿ, ಪಳಂಗಪ್ಪ, ಮೇಕೇರಿರ ರೋನಕ್, ನೆಹಾಲ್ ತಲಾ ಒಂದೊಂದು ಗೋಲುಗಳ ಕಾಣಿಕೆ ನೀಡಿದರು. ಸೋಮೆಯಂಡವು ಕೋಟೆರವನ್ನು 6-3 ಗೋಲುಗಳಿಂದ ಸೋಲಿಸಿತು. ಸೋಮೆಯಂಡ ಅಪ್ಪಚ್ಚು 4, ಅಪ್ಪಯ್ಯ 2, ಕೋಟೇರ ಕೌಶಿಕ್ 2, ಭರತ್ 1 ಗೋಲು ಹೊಡೆದರು.
ಕಡೇಮಡಕ್ಕೆ ಇಟ್ಟೀರ ವಿರುದ್ಧ 5-4 ಗೋಲುಗಳ ರೋಚಕ ಗೆಲುವು ದೊರೆಯಿತು. ಕಡೇಮಡ ಚರ್ಮಣ 4, ಕಾವೇರಪ್ಪ 1, ಇಟ್ಟೀರ ಅಚ್ಚಯ್ಯ 2, ಕಿರಣ್, ಕುಟ್ಟಪ್ಪ ತಲಾ ಒಂದೊಂದು ಗೋಲು ಬಾರಿಸಿದರು.

ನೆಲ್ಲಮಕ್ಕಡ ತಂಡವು ಪೊರುಕೊಂಡವನ್ನು 6-1 ಗೋಲುಗಳಿಂದ ಮಣಿಸಿತು. ನೆಲ್ಲಮಕ್ಕಡ ಸೋಮಯ್ಯ 3, ಪೂವಣ್ಣ, ಮೊಣ್ಣಪ್ಪ, ಸಚಿನ್, ಪೊರುಕೊಂಡ ಅನಿಲ್ ಒಂದೊಂದು ಗೋಲುಗಳ ಕಾಣಿಕೆ ನೀಡಿದರು.

ಇಂದಿನ ಪಂದ್ಯಗಳು
ಬೆ. 8.30: ಪರದಂಡ-ಮಾತಂಡ
9.30: ಮಚ್ಚಂಡ-ಮಂಡೇಪಂಡ
10.00: ಕುಲ್ಲೇಟಿರ-ಚೆಪ್ಪುಡೀರ
10.30: ಪೆಮ್ಮಂಡ-ಚೇಂದಂಡ
11.00: ಕುಪ್ಪಂಡ (ಕೈಕೇರಿ)-ಚೆಕ್ಕೇರ
11.30: ಚೇನಂಡ-ಮಾರ್ಚಂಡ
12.00: ಕಲಿಯಂಡ-ಸೋಮೆಯಂಡ
12.30: ಕಡೇಮಡ-ನೆಲ್ಲಮಕ್ಕಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net