ಇಂದು ಶರಣರನ್ನು ಕೋರ್ಟಿಗೆ ಹಾಜರು ಪಡಿಸಲಿರುವ ಪೊಲೀಸರು

CTD 2 MURUGA SHARNARUuuuuuuuuuuuuuuuuu
Published on

ಚಿತ್ರದುರ್ಗ:ಪೋಕ್ಸೋ,ದೌರ್ಜನ್ಯ ಪ್ರಕರಣದಡಿ ಬಂಧಿತ ಮುರುಘಾ ಶರಣರ ಪೊಲೀಸ್ ಕಸ್ಟಡಿ ಅವಧಿ ಸೋಮವಾರ ಮುಕ್ತಾಯವಾಗಿ ದ್ದು,ಬೆಳಗ್ಗೆ 11ಗಂಟೆಗೆ ಪೊಲೀಸರು ಅವರನ್ನು ಕೋರ್ಟಿಗೆ ಹಾಜರು ಪಡಿಸಲಿದ್ದಾರೆ.

ಕೋರ್ಟಿಗೆ ಹಾಜರು ಪಡಿಸುವ ಮುನ್ನ ಜಿಲ್ಲಾಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಅವರನ್ನು ಒಳಪಡಿಸಲಿದ್ದಾರೆ. ಕೋರ್ಟ್ ಬಳಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಶರಣರಿಗೆ ಜಾಮೀನು ಕೋರಿ ಅವರ ಪರ ವಕೀಲರು ಶನಿವಾರವೇ ಅರ್ಜಿ ಸಲ್ಲಿಸಿದ್ದಾರೆ. ಸೆ.7ರಂದು ಈ ಅರ್ಜಿ ವಿಚಾರಣೆಗೆ ಬರಲಿದೆ.

ಭಾನುವಾರ ಸ್ಥಳ ಮಹಜರು ನಡೆಸಿದ ಬಳಿಕ ಡಿವೈಎಸ್ಪಿ ಕಚೇರಿಗೆ ಅವರನ್ನು ಮರಳಿ ಕರೆ ತರಲಾಗಿತ್ತು. ಮಹಜರು ಆಧರಿಸಿ ಅವರನ್ನು ಮತ್ತೆ ಹೆಚ್ಚಿನ ವಿಚಾರಣೆಗೆ ಪೊಲೀಸರು ಒಳಪಡಿಸಿದರು. ಬೆಳಗ್ಗೆ ಶರಣರ ಆರೋಗ್ಯ ತಪಾಸಣೆ ನಡೆಯಿತು. ಮತ್ತೆ ಕಸ್ಟಡಿಗೆ ಕೊಡುವಂತೆ ಪೊಲೀಸರು ನ್ಯಾಯಾಲಯವನ್ನು ಕೋರುತ್ತಾರೆಯೇ ಎಂಬುದಿನ್ನು ಗೊತ್ತಾಗಬೇಕಿದೆ.

ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಲಿದೆ. ಒಂದು ವೇಳೆ ಪೊಲೀಸರು ತಮ್ಮ ಕಸ್ಟಡಿಗೆ ಕೊಡುವಂತೆ ಮತ್ತೆ ಕೋರಿಕೆ ಸಲ್ಲಿಸಿದರೆ ಕೋರ್ಟ್ ಅದನ್ನು ಮನ್ನಿಸುವುದೆ ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದೇ ಎಂಬ ಮಾಹಿತಿ ಕೆಲ ಹೊತ್ತಿನಲ್ಲಿ ಬಹಿರಂಗವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net