ಇಂದು ವಿವಿಧೆಡೆ ಜಾತ್ರಾ ಮಹೋತ್ಸವ

Published on

ಬೈಲಹೊಂಗಲ: ಪಟ್ಟಣದ ಶ್ರೀ ರಾಮಲಿಂಗೇಶ್ವರ ದೇವಸ್ಥಾನ (ಕಲಗುಡಿ) ಜಾತ್ರಾ ಮಹೋತ್ಸವ ಆ.26ರಂದು ಜರುಗಲಿದೆ. ಜಾತ್ರೆ ನಿಮಿತ್ತ ಬೆಳಗ್ಗೆ ರುದ್ರಾಭಿಷೇಕ, ಎಲೆ ಪೂಜೆ ಮಧ್ಯಾಹ್ನ ಅನ್ನಪ್ರಸಾದ ಸಂಜೆ 4 ಗಂಟೆಯ ನಂತರ ಮಹಾರಥೋತ್ಸವ, ಪಲ್ಲಕ್ಕಿ ಉತ್ಸವ, ಮಹಾಮಂಗಳಾರತಿ ಜರಗುವುದು ಎಂದು ದೇವಸ್ಥಾನದ ಪ್ರಧಾನ ಅರ್ಚಕ ಹರ್ಷ ರಾಮಲಿಂಗಯ್ಯ ಪೂಜಾರ ತಿಳಿಸಿದ್ದಾರೆ.

ಕಟಕೋಳ ವರದಿ: ಶ್ರಾವಣ ಮಾಸದ ನಿಮಿತ್ತ ಆ.26ರಂದು ಸ್ಥಳಿಯ ಹೋಳಿಕಟ್ಟೆಯ ಬಸವೇಶ್ವರ ಜಾತ್ರೆ ನಿಮಿತ್ತ ರಥೋತ್ಸವವು ಸಂಜೆ 5 ಗಂಟೆಗೆ ಜರುಗಲಿದೆ. ಬೆಳಗ್ಗೆ ಬಸವಣ್ಣನ ಮೂರ್ತಿಗೆ ಅಭಿಷೇಕ, ಬಿಲ್ವಾರ್ಚನೆ ಜರುಗಲಿದೆ. ಬಸವೇಶ್ವರ ನಾಟ್ಯ ಸಂದಿಂದ ರಾತ್ರಿ 10 ಗಂಟೆಗೆ ಕೆರಳಿದ ಅವಳಿ ಸರ್ಪಗಳು ನಾಟಕ ಪ್ರದರ್ಶನವಿದೆ ಎಂದು ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ಶಿರಸಂಗಿ ವರದಿ: ಸಮೀಪದ ಬಸಿಡೋಣಿ ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವ ಶ್ರಾವಣ ಮಾಸದ 4ನೇ ಸೋಮವಾರ ಆ.26 ರಂದು ಜರುಗಲಿದೆ. ಬೆಳಗ್ಗೆ 8 ಗಂಟೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚಣೆ, 10 ಗಂಟೆಗೆ ಬಸವೇಶ್ವರ ದೇವಸ್ಥಾನದಿಂದ ಶ್ರೀ ಮಾರುತೇಶ್ವರ ದೇವಸ್ಥಾನದ ಮೂಲಕ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಹಾಗೂ ಶಿವಾನಂದ ಮಠದ ವರೆಗೆ ಪಲ್ಲಕ್ಕಿ ಉತ್ಸವ, ಕುಂಭ, ಆರತಿ ಸೇರಿದಂತೆ ಸಕಲ ವಾದ್ಯ ಮೇಳಗಳೊಂದಿಗೆ ಜರುಗುವುದು. 2 ಗಂಟೆಗೆ ಮಹಾ ಅನ್ನಪ್ರಸಾದ ಮತ್ತು ಸಂಜೆ 5 ಗಂಟೆಗೆ ರಥೋತ್ಸವ ನಡೆಯಲಿದೆ. ಶಿವಾನಂದ ಮಠದ ಗಂಗಾಧರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಕಪ್ಪ ದನದಮನಿ ಅಧ್ಯತೆ ವಹಿಸುವರು. ನಾಗರಾಜ ನೇಗಿನಾಳ, ಮಡಿವಾಳಪ್ಪ ಪೆಂಟೆದ ಸೇರಿದಂತೆ ಸಕಲ ಭಕ್ತರು ಆಗಮಿಸುವರು ಎಂದು ಬಸವೇಶ್ವರ ಸಂದ ಅಧ್ಯ ಮಹಾಂತೇಶ ಜಾವೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗ್ರಾಮದ ಬಜಾರ್​ ಗಲ್ಲಿಯ ಬಸವೇಶ್ವರ ದೇವಸ್ಥಾನದಲ್ಲಿ ಆ.26ರಂದು ಮಹಾ ರುದ್ರಾಭಿಷೇಕ ನೆರವೇರಲಿದೆ. ಬೆಳಗ್ಗೆ ಅಭಿಷೇಕ, ಭಜನಾ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ದೇವಸ್ಥಾನದ ಸದಸ್ಯ ಈಶ್ವರ ಪಟ್ಟೇದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಟಗಿ ವರದಿ: ಸಮೀಪದ ಬಿಳಕಿ&ಅವರೋಳ್ಳಿ ರುದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವ ಆ. 26ರಂದು ಶ್ರೀ ಮಠದ ಚನ್ನಬಸವ ದೇವರು ಸಾನ್ನಿಧ್ಯದಲ್ಲಿ ನಡೆಯಲಿದೆ. ಜಾತ್ರೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ ಮಹಾರುದ್ರಾಭಿಷೆಕ, ಸಹಸ್ರ ಬಿಲ್ವಾರ್ಚಣೆ, 12 ಗಂಟೆಗೆ ಪಲ್ಲಕ್ಕಿ ಉತ್ಸವ, ಸಂಜೆ 4 ಗಂಟೆಗೆ ಮಹಾರಥೋತ್ಸವ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net