ಬಳ್ಳಾರಿ : ನಗರ ಉಪವಿಭಾಗ ವ್ಯಾಪ್ತಿಯ ಅಲ್ಲಿಪುರ ವಿದ್ಯುತ್ ವಿತರಣ ಕೇಂದ್ರದಿಅದ ವಿದ್ಯುತ್ ಸರಬರಾಜು ಆಗುವ ಎಫ್-72, ಎಫ್-34 ರ ನಿರ್ವಹಣಾ ಕಾರ್ಯವನ್ನು ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬಳ್ಳಾರಿ ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.ವಿದ್ಯುತ್ ವ್ಯತ್ಯಯ ಪ್ರದೇಶಗಳು: ಕಂಟೋನ್‌ಮೆಅಟ್, ಸೂರ್ಯ ಕಾಲೋನಿ, ತಿಲಕ್ ನಗರ, ಸುಧಾ ಕ್ರಾಸ್, ನಂದಿ ಕಾಲನಿ, ಹೆಚ್‌ಆರ್‌ಜಿ ಕಾಲನಿ, ಜಯ ನಗರ, ರಹಿಮಬಾದ್ ಕಾಲನಿ, ನಲಂದ ಕಾಲೇಜ್, ವಿಜಯನಗರ ಕಾಲನಿ, ಕೆಹೆಚ್‌ಬಿ ಕಾಲನಿ, ಜಗನ್ನಾಥ ಮಂದಿರ, ಭಾಸ್ಕರ ನಾಯ್ಡು, ಸೆಂಟ್ ಜೋಸೆಫ್ ಸ್ಕೂಲ್, ವಡ್ಡೆ ನಾಗಪ್ಪ ಲೇಔಟ್, ಮೊಹಮ್ಮದಿಯಾ ಸ್ಕೂಲ್, ರೇಡಿಯೋ ಪಾರ್ಕ್, ಕೌಲ್ ಬಜಾರ್, ನಲಾ ಸ್ಟಿಟ್, ಪೊಲೀಸ್ ಸ್ಟೇಷನ್, ಸೇರಿದಂತೆ ಇನ್ನೂ ಮುಂತಾದ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.