

ಚಿತ್ರದುರ್ಗ:ಕೃಷಿ ತಂತ್ರಜ್ಞರ ಸಂಸ್ಥೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ನ.19ರಂದು ಬೆಳಗ್ಗೆ 10ಕ್ಕೆ ನಗರದ ಎಪಿಎಂಸಿಯಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಬೆಂಗಳೂರು ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಎಸ್.ಗಣೇಶಯ್ಯ ಅವರು ಜೀವಜಾಲದ ಸ್ಥಿರತೆ ಕಾಪಾಡುವ ಅಗೋಚರ ಕೊಂಡಿಗಳು ಹಾಗೂ ಡಾ ವಿ.ವಿ.ಬೆಳವಾಡಿ ಅವರು ಪರಾಗಸ್ಪರ್ಶಕ್ಕಾಗಿ ಜೇನು ನೊಣಗಳ ಸಂರಕ್ಷಣೆ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಸಂಸ್ಥೆ ಕಾರ‌್ಯದರ್ಶಿ ಜಿ.ಟಿ.ವೀರಭದ್ರರೆಡ್ಡಿ ತಿಳಿಸಿದ್ದಾರೆ.