ಇಂದು ಮಾರುತಿ ದೇವರ ಕಡೇ ಓಕುಳಿ

8BTG1
Published on

ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಮಾರುತಿ ದೇವರ ಕಡೇ ಓಕುಳಿ ಜೂ. 9ರಂದು ಸಂಜೆ 5 ಗಂಟೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಓಕುಳಿ ನಿಮಿತ್ತ ಗ್ರಾಮದ ಬೀದಿಗಳು ತಳಿರು&ತೋರಣ, ವಿದ್ಯುತ್​ ದೀಪ್​ಗಳಿಂದ ಅಲಂಕಾರಗೊಂಡು ಕಂಗೊಳಿಸುತ್ತವೆ. ಗ್ರಾಮಸ್ಥರು ಸಕಲ ವಾದ್ಯಮೇಳದೊಂದಿಗೆ ದೇವಾಲಯಕ್ಕೆ ತೆರಳಿ ನೆವೇದ್ಯ, ಪೂಜೆ ಮಾಡಿ ಹರಕೆ ತೀರಿಸುತ್ತಾರೆ. ಭಕ್ತರ ಇಷ್ಟಾರ್ಥ ಪೂರೆಸುವ ಹನುಮಂತನ ಓಕುಳಿ ಗ್ರಾಮದ ದೊಡ್ಡ ಜಾತ್ರಾ ಮಹೋತ್ಸವ. ಸಂಜೆ 5 ಗಂಟೆಗೆ ಕುದುರೆ, ನವಿಲು ಸೇರಿ ವಿವಿಧ ಪ್ರಾಣಿ, ಪಗಳ ಸೋಗಿನ ನಾಲ್ಕೆ$ದು ಗುಂಪುಗಳ ಯುವಕರು ಮರಗಾಲು ಕಟ್ಟಿಕೊಂಡು ವಾದ್ಯಮೇಳಗಳ ತಾಳಕ್ಕೆ ತಕ್ಕಂತೆ ಕುಣಿಯುವ ಕುಣಿತ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.

ಗಮನ ಸೆಳೆಯುವ ಓಕುಳಿ: ಓಕುಳಿಯಲ್ಲಿ ಮಹಿಳೆಯರು, ಮಕ್ಕಳು, ಯುವಜನರು, ವದ್ಧರು ಭಾಗಿಯಾಗಿ ಸಂಭ್ರಮ ಪಡುತ್ತಾರೆ. ಸುಮಾರು ಮೂರ್ನಾಲ್ಕು ಗಂಟೆ ಒಂಟೆಗಾಲಲ್ಲಿ ನಿಂತು ಓಕುಳಿಯ ಸೊಬಗು ಸವಿಯುತ್ತಾರೆ. ಇಂಥ ಓಕುಳಿಯ ಸಂಭ್ರಮ ನೋಡುವ ಸಲುವಾಗಿಯೇ ಈ ಹಿಂದೆ ಬೇರೆ ಬೇರೆ ಹಳ್ಳಿಗಳ ಜನರು ಬೆಟಗೇರಿಗೆ ಬೀಗತನ ಮಾಡುತ್ತಿದ್ದರೆಂದು ಹಿರಿಯರು ಸಂಭ್ರಮದಿಂದ ಈಗಲೂ ಹೇಳಿಕೊಳ್ಳುತ್ತಾರೆ.

ಹೋಳಿಗೆ ಊಟ: ಓಕುಳಿ ಪ್ರಯುಕ್ತ ಗ್ರಾಮಸ್ಥರು ಮನೆಯ ಹೆಣ್ಣು ಮಕ್ಕಳನ್ನು ತಪ್ಪದೇ ತವರಿಗೆ ಕರೆಸಿಕೊಳ್ಳುತ್ತಾರೆ. ಬೀಗ&ಬಿಜ್ಜರು, ಬಂಧು, ಬಾಂಧವರ ಸಂಗಮ ಏರ್ಪಟ್ಟು ಓಕುಳಿಯ ಸಡಗರ ಮೇಳೈಸುತ್ತದೆ. ಕಡೆ ಓಕುಳಿ ದಿನ ನಾನಾ ಬಗೆಯ ಮಷ್ಟಾನ್ನ ಭೋಜನ ತಯಾರಿಸಿ ಎಲ್ಲರೊಂದಿಗೆ ಸೇರಿ ಸವಿಯುತ್ತಾರೆ.

ವಿವಿಧ ಕಾರ್ಯಕ್ರಮ: ಗ್ರಾಮದಲ್ಲಿ ಕೃಷ್ಣ ಪಾರಿಜಾತ ನಾಟಕ, ಸಿಡಿಮದ್ದು ಸುಡುವುದು ಸೇರಿ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net