ಇಂದು ಭಾರಿ ಮಳೆ ಮುನ್ಸೂಚನೆ

2bkl1_
Published on

ಕಾರವಾರ: ಜಿಲ್ಲೆಯಲ್ಲಿ ಆ. 7ರಂದು ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರೆಡ್ ಅಲರ್ಟ್ ಘೋಷಿಸಲಾಗಿದ್ದು, ಜನ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಡಳಿತ ಪ್ರಕಟಣೆ ಹೊರಡಿಸಿದೆ. ಆ.8 ರಿಂದ 10 ರವರೆಗೆ ಸಾಧಾರಣ ಮಳೆಯಾಗಲಿದ್ದು, ಆರೇಂಜ್ ಅಲರ್ಟ್ ಘೋಷಿಸಲಾಗಿದೆ.
ಶುಕ್ರವಾರ ರಾತ್ರಿ ಕರಾವಳಿಯಲ್ಲಿ ಭಾರಿ ಮಳೆಯಾಗಿದ್ದು, ಶನಿವಾರ ಹದವಾಗಿ ಮಳೆಯಾಗಿದೆ. ಶನಿವಾರ ಬೆಳಗಿನ ವರದಿಯಂತೆ ಅಂಕೋಲಾ-110.1, ಭಟ್ಕಳ-65.8, ಹಳಿಯಾಳ-15.9, ಹೊನ್ನಾವರ 100.7, ಕಾರವಾರ-112.9, ಕುಮಟಾ-146.1, ಮಂಡಗೋಡ-24.7, ಸಿದ್ದಾಪುರ-99.9, ಶಿರಸಿ-94, ಜೊಯಿಡಾ-50, ಯಲ್ಲಾಪುರ-48.2, ದಾಂಡೇಲಿ-21.3 ಮಿಮೀ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net