ಇಂದು ಭಗೀರಥ ಮೂರ್ತಿ ಅನಾವರಣ

1
Published on

ಮೂಡಲಗಿ: ಪಟ್ಟಣದಲ್ಲಿ ಮಹರ್ಷಿ ಭಗೀರಥರ ಮೂರ್ತಿ ಅನಾವರಣ ಹಾಗೂ ಉಪ್ಪಾರ ಸಮುದಾಯದ ಸತ್ಕಾರ ಸಮಾರಂಭವು ಆ.5ರಂದು ಬೆಳಗ್ಗೆ 10 ಗಂಟೆಗೆ ಸತ್ಯಭಾಮಾ ರುಕ್ಮಿಣಿ ಬಾಳಪ್ಪ ಹಂದಿಗುಂದ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ತಾಲೂಕು ಉಪ್ಪಾರ ಸಂದ ಅಧ್ಯ ರಾಮಣ್ಣ ಹಂದಿಗುಂದ ಹೇಳಿದರು.

ಪಟ್ಟಣದ ಸತ್ಯಭಾಮಾ ರುಕ್ಕಿಣಿ ಬಾಳಪ್ಪ ಹಂದಿಗುಂದ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು. ಹೊಸದುರ್ಗದ ಜಗದ್ಗುರು ಪುರುಷೋತ್ತಮಾನಂದಪುರಿ ಸ್ವಾಮೀಜಿ, ಪಟ್ಟಣದ ದತ್ತಾತ್ರೇಯಬೋಧ ಸ್ವಾಮೀಜಿ, ಸುಣಧೋಳಿ ಶಿವಾನಂದ ಸ್ವಾಮೀಜಿ, ಬಾಗೋಜಿಕೊಪ್ಪದ ಡಾ.ಶಿವಲಿಂಗ ಮುರುರಾಜೇಂದ್ರ ಸ್ವಾಮೀಜಿ, ಕಟಕಬಾವಿ ಅಭಿನವ ಧರೇಶ್ವರ ಸ್ವಾಮೀಜಿ, ಉಪ್ಪಾರಹಟ್ಟಿ ನಾಗಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯತೆ ವಹಿಸುವರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ಶಾಸಕರಾದ ರಮೇಶ ಜಾರಕಿಹೊಳಿ, ಪುಟ್ಟರಂಗಶೆಟ್ಟಿ, ಎಂಎಲ್​ಸಿ ಲಖನ ಜಾರಕಿಹೊಳಿ, ಮುಖಂಡರಾದ ಸವೋರ್ತ್ತಮ ಜಾರಕಿಹೊಳಿ, ರಾಮಣ್ಣ ಹಂದಿಗುಂದ ಜ್ಯೋತಿ ಬೆಳಗಿಸುವರು. ಸಂಸದರಾದ ಜಗದೀಶ ಶೆಟ್ಟರ್​, ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಗುವುದು.ಪೂರ್ಣ ಕುಂಭಮೇಳ ಮೆರವಣಿಗೆ ಜರುಗಲಿದೆ ಎಂದರು.
ವಕೀಲ ಲಕ್ಷ$್ಮಣ ಅಡಿಹುಡಿ, ಈಶ್ವರ ಕಂಕಣವಾಡಿ, ಮಹಾದೇವ ಕಂಕಣವಾಡಿ, ಸುಭಾಸ ಗುಡ್ಯಾಗೋಳ, ಶಿವಪ್ಪ ಅಟ್ಟಿಮಟ್ಟಿ, ಅಜ್ಜಪ್ಪ ಕಂಕಣವಾಡಿ, ಮಹಾದೇವ ಕರಗಣ್ಣಿ, ಭರಮಪ್ಪ ಕಪ್ಪಲಗುದ್ದಿ, ಅಲ್ಲಪ್ಪ ಕಂಕಣವಾಡಿ, ಯಲ್ಲಪ್ಪ ಖಾನಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net