ಇಂದು ನೇತ್ರದಾನ ಜಾಗೃತಿ ಜಾಥಾ

eye
ಜಮಖಂಡಿ ನಗರದ ಕಾನಿಪ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಾ. ದೀಪಾ ಮುಗಳಿ ಉದಗಟ್ಟಿ ಮಾತನಾಡಿದರು. ಸುಧಾ ಪಾಟೀಲ, ಪಿಆರ್‌ಒ ರವಿ ದಾಸರ ಇದ್ದರು.
Published on

ಜಮಖಂಡಿ: ನೇತ್ರದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಿಂದ ಸೆ.7 ರಂದು ಬೆಳಗ್ಗೆ 8:30ಕ್ಕೆ ದೇಸಾಯಿ ವೃತ್ತದಿಂದ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆವರೆಗೆ ಜಾಥಾ ನಡೆಯಲಿದೆ ಎಂದು ನೇತ್ರ ತಜ್ಞೆ ಡಾ. ದೀಪಾ ಮುಗಳಿ ಉದಗಟ್ಟಿ ಹೇಳಿದರು.
ನಗರದ ಕಾನಿಪ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಮ್ಮ ದೇಶದಲ್ಲಿ 1.5 ಕೋಟಿ ಜನ ಅಂಧತ್ವದಿಂದ ಬಳಲುತ್ತಿದ್ದಾರೆ. ಆದರೆ, ಕೇವಲ 50 ಸಾವಿರ ನೇತ್ರ ದಾನಿಗಳಿದ್ದಾರೆ. ದಾನಿಗಳು ಹೆಚ್ಚಾದರೆ ಅಂಧರ ಬಾಳಿಗೆ ಬೆಳಕು ನೀಡಿದಂತಾಗುವುದು. ನೇತ್ರ ದಾನಿಗಳ ಸಂಖ್ಯೆ ಹೆಚ್ಚಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ದಾನಿಗಳು ಎಂ.ಎಂ. ಜೋಶಿ ವಿಜ್ಞಾನ ಸಂಸ್ಥೆಯ ಕ್ಯುಆರ್ ಕೋಡ್ ಸ್ಕಾೃನ್ ಮಾಡುವ ಮೂಲಕ ತಮ್ಮ ಹೆಸರು ನೋಂದಾಯಿಸಬಹುದಾಗಿದೆ ಎಂದರು.
ಈ ಜಾಥಾದಲ್ಲಿ ವಿವಿಧ ಸಂಘ-ಸಂಸ್ಥೆಗಳು, ಎನ್‌ಎಸ್‌ಎಸ್, ಎನ್‌ಸಿಸಿ, ಎಲ್ಲ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿ 500ಕ್ಕೂ ಅಧಿಕ ಜನ ಜಾಥಾದಲ್ಲಿ ಭಾಗವಹಿಸಲಿದ್ದಾರೆ. ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ಡಿವೈಎಸ್‌ಪಿ ಶಾಂತವೀರ ಈ., ತಹಸೀಲ್ದಾರ್ ಸದಾಶಿವ ಮಕ್ಕೋಜಿ, ಟಿಎಚ್‌ಒ ಗೈಬುಸಾಬ ಗಲಗಲಿ, ಯುಟೂಬ್ ಸ್ಟಾರ್ ನಿಂಗರಾಜ ಸಿಂಗಾಡಿ ಆಗಮಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಆಡಳಿತಾಧಿಕಾರಿ ಸುಧಾ ಪಾಟೀಲ, ಪಿಆರ್‌ಒ ರವಿ ದಾಸರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net