ಬಳ್ಳಾರಿ : ನಗರದ ಕೇಂದ್ರ ಕಾರಾಗೃಹದಲ್ಲಿ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರನ್ನು ಸೋಮವಾರ ವೈದ್ಯರು ಆರೋಗ್ಯ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಡಿಐಜಿ ಟಿ.ಪಿ. ಶೇಷ ಶನಿವಾರ ಭೇಟಿ ನೀಡಿ ದರ್ಶನ್ ಊಟ ಹಾಗೂ ಆರೋಗ್ಯದ ವಿಚಾರಿಸದ ವೇಳೆ ಬೆನ್ನುಲುಬು ಸಮಸ್ಯೆಯಿದ್ದು, ಸರ್ಜಿಕಲ್ ಚೇರ್ ನೀಡುವಂತೆ ಮನವಿ ಮಾಡಿದ್ದರು. ಆದ್ದರಿಂದ, ಸೋಮವಾರ ಬಳ್ಳಾರಿ ಜೈಲಿಗೆ ವೈದ್ಯರು ಭೇಟಿ ನೀಡಿ ಆರೋಗ್ಯ ಪರೀಕ್ಷೆ ನಡೆಸಿ, ಮೆಡಿಕಲ್ ವರದಿಯನ್ನು ಜೈಲಿನ ಅಧಿಕಾರಿಗಳಿಗೆ ನೀಡಲಿದ್ದಾರೆ. ಬಳಿಕ ಸರ್ಜಿಕಲ್ ಚೇರ್ ನೀಡುವುದು ಅಥವಾ ಬೇಡ ಎಂಬುದು ಅಧಿಕಾರಿಗಳು ತಿರ್ಮಾನಿಸಲಿದ್ದಾರೆ. ದರ್ಶನ್ ಭಾನುವಾರ ಬೆಳ್ಳಗೆ ಉಪಹಾರಕ್ಕೆ ಪಲಾವ್, ಮಧ್ಯಾಹ್ನ ಚಪಾತಿ, ಅನ್ನ, ಸಾಂಬರ್ ಹಾಗೂ ರಾತ್ರಿ ರಾಗಿ ಮುದ್ದೆ, ಅನ್ನ ಸಾಂಬಾರ್ ಸೇವನೆ ಮಾಡಿದ್ದಾರೆ. ನಟ ದರ್ಶನ್ ಬೆಳ್ಳಗೆ ಬ್ಯಾರಕ್ ಮುಂದೆ ಕೆಲ ಕಾಲ ವಾಕ್ ಮಾಡಿ ವಿಶ್ರಾಂತಿ ಪಡೆದಿದ್ದಾರೆ. ಅಲ್ಲದೆ, ಯಥಾಸ್ಥಿತಿಯಂತೆ ಬೇಸರ ಕಳೆಯಲು ಪುಸ್ತಕಗಳ ಮೊರೆ ಹೋಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಸೊಳ್ಳೆಗಳ ಕಾಟದಿಂದ ನಿದ್ದೆ ಮಾಡಲು ಪರದಾಡುತ್ತಿದ್ದಾರೆ ಎಂದು ಜೈಲು ಸಿಬ್ಬಂದಿಯೊಬ್ಬರು ತಿಳಿಸಿದರು.