ಬಳ್ಳಾರಿ : ಇಂಧನ ಸಚಿವ ಕೆ.ಜೆ.ಜಾರ್ಜ ಅವರು ಜು.11 ಗುರುವಾರದಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 9.15 ಕ್ಕೆ ಜಿಂದಾಲ್ ವಿಮಾನ ನಿಲ್ದಾಣದಿಂದ ರಸ್ತೆಯ ಮೂಲಕ ಆಗಮಿಸಿ, ಬೆಳಿಗ್ಗೆ 10 ಗಂಟೆಯಿಂದ 10.45 ರ ವರೆಗೆ ಪಕ್ಷದ ಕಚೇರಿಗೆ ಭೇಟಿ ನೀಡುವರು.
ಬಳಿಕ ಬೆಳಿಗ್ಗೆ 11 ಗಂಟೆಯಿಂದ 12.30 ರ ವರೆಗೆ ಡಿಸಿ ಕಚೇರಿಯಲ್ಲಿ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳೊಂದಿಗೆ ಸಭೆ ಹಾಗೂ ಪತ್ರಿಕಾಗೋಷ್ಠಿ ನಡೆಸುವರು. ಮಧ್ಯಾಹ್ನ 01.45 ಗಂಟೆಯಿಂದ 03 ಗಂಟೆಯವರೆಗೆ ಬಿಟಿಪಿಎಸ್‌ಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸುವವರು. ಬಳಿಕ ಮಧ್ಯಾಹ್ನ 03.30 ಕ್ಕೆ ಜಿಂದಾಲ್‌ನಿಂದ ಚಿಕ್ಕಮಗಳೂರು ಜಿಲ್ಲೆಗೆ ಪ್ರಯಾಣಿಸಲಿದ್ದಾರೆ.