ಇಂದಿರಾ ಗಾಂಧಿ ಸೇವೆ ಅಪಾರ

19Jaggu7-web
ಬೆಳಗಾವಿಯಲ್ಲಿ ಇಂದಿರಾ ಗಾಂಧಿ ಜನ್ಮದಿನ ಆಚರಿಸಲಾಯಿತು. ಸತೀಶ ಜಾರಕಿಹೊಳಿ, ವಿನಯ ಕುಲಕರ್ಣಿ, ಮಲಗೌಡ ಪಾಟೀಲ, ವಿನಯ ನಾವಲಗಟ್ಟಿ ಇತರರು ಇದ್ದರು.
Published on

ಬೆಳಗಾವಿ: ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರು 17 ವರ್ಷ ಈ ದೇಶದ ಪ್ರಧಾನಿಯಾಗಿ ಬಡವರು, ದೀನ ದಲಿತರ, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಶ್ರಮಿಸಿದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶನಿವಾರ ಇಂದಿರಾ ಗಾಂಧಿ 105ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿರಾ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಬೆಳೆದರು. ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿದ್ದ ಅವರು, ಕೆಳ ವರ್ಗದ ಜನರಿಗಾಗಿ ಜನಪರ ಯೋಜನೆ ರೂಪಿಸಿದ್ದರು. ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿ, ಊಳುವವನೇ ಭೂಮಿಯ ಒಡೆಯ ಎಂಬ
ಯೋಜನೆಗಳನ್ನು ಜಾರಿಗೆ ತಂದರು. ಅವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು, ಅವರ ದಾರಿಯಲ್ಲಿ ಸಾಗೋಣ ಎಂದರು. ಮಾಜಿ ಸಚಿವ ವಿನಯ ಕುಲಕರ್ಣಿ, ಅಶೋಕ ಪಟ್ಟಣ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ, ವಿನಯ ನಾವಲಗಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net