ಇಂದಿರಾ ಕ್ಯಾಂಟೀನ್‌ನಲ್ಲಿ ಸ್ವಚ್ಛತೆ ಕಾಪಾಡಿ

KDR visit
ಕಡೂರು ಕೆಎಲ್‌ವಿ ವೃತ್ತದಲ್ಲಿ ನೀರಿನ ಕಾರಂಜಿ ಕಾಮಗಾರಿಯನ್ನು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಪರಿಶೀಲಿಸಿದರು. ಮಂಜುಳಾ ಚಂದ್ರು, ಕೆ.ಎಸ್.ಮಂಜುನಾಥ್, ಮೂರ್ತಿರಾವ್, ಕೆ.ಆರ್.ಚಂದ್ರು, ಚಿನ್ನರಾಜು, ಶ್ರೇಯಸ್‌ಕುಮಾರ್, ಶ್ರೀನಿವಾಸ್‌ಮೂರ್ತಿ ಇತರರಿದ್ದರು.
Published on

ಕಡೂರು: ಬಡವರ ಜೇಬಿಗೆ ಹೊರೆಯಾಗದಂತೆ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್‌ನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಆಹಾರದ ಗುಣಮಟ್ಟ ಕಾಪಾಡಿಕೊಂಡು ಕಾರ್ಯನಿರ್ವಹಿಸಬೇಕಿದೆ ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಕೆಎಲ್‌ವಿ ವೃತ್ತದ ಬಳಿ ಇಂದಿರಾ ಕ್ಯಾಂಟೀನ್‌ನಲ್ಲಿ ಗುರುವಾರ ಪರಿಶೀಲಿಸಿ ಮಾತನಾಡಿ, ಇಂದಿರಾ ಕ್ಯಾಂಟೀನ್‌ಗೆ ಪುರಸಭೆಯಿಂದ ಛಾವಣಿ ದುರಸ್ತಿ ಮಾಡಿಸಿ, ಮೂಲ ಸೌಕರ್ಯ ಕಲ್ಪಿಸಲಾಗಿದೆ. ಮುಖ್ಯವಾಗಿ ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಕ್ಯಾಂಟೀನ್ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ ಎಂದರು.

ವ್ಯವಸ್ಥಾಪಕ ನೂತನ್ ಮಾತನಾಡಿ, ಸರ್ಕಾರದ ನಿಯಮದಂತೆ ಆಹಾರ ತಯಾರಿಸಿ ಗ್ರಾಹಕರಿಗೆ ನೀಡಲಾಗುತ್ತಿದೆ. ಸಿಬ್ಬಂದಿಗೆ ಸಮರ್ಪಕ ವೇತನ ನೀಡಲು ಬಿಲ್‌ಗಳು ಬಾಕಿ ಉಳಿದುಕೊಂಡಿದೆ ಎಂದು ತಿಳಿಸಿದರು.

ಅಡುಗೆ ಸಿಬ್ಬಂದಿ ಸರೋಜಮ್ಮ ಮಾತನಾಡಿ, ಐದು ತಿಂಗಳಿನಿಂದ ಇಂದಿರಾ ಕ್ಯಾಂಟೀನ್ ಏಜೆನ್ಸಿಯಿಂದ ವೇತನ ಪಾವತಿಸಿದ ಕಾರಣ ಸಮಸ್ಯೆಯಾಗುತ್ತಿದೆ. ವೇತನ ಮಂಜೂರು ಮಾಡಿಸಿಕೊಡುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಿದರು.

ಕ್ಯಾಂಟೀನ್‌ನಲ್ಲಿ ಬೆಳಗ್ಗೆ ತಯಾರಿಸಿದ ಇಡ್ಲಿ ಮತ್ತು ರೈಸ್‌ಬಾತ್ ಉಪಾಹಾರವನ್ನು ಸವಿದರು. ನಂತರ ಕೆಎಲ್‌ವಿ ವೃತ್ತದಲ್ಲಿ ನೀರಿನ ಕಾರಂಜಿ ಅಳವಡಿಕೆ ಕಾಮಗಾರಿ ವೀಕ್ಷಿಸಿದರು. ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ಆರೋಗ್ಯ ನಿರೀಕ್ಷಕ ಶ್ರೀನಿವಾಸ್‌ಮೂರ್ತಿ, ಪರಿಸರ ಅಭಿಯಂತರ ಶ್ರೇಯಸ್‌ಕುಮಾರ್, ಮುಖಂಡರಾದ ಕೆ.ಆರ್.ಚಂದ್ರು, ಚಿನ್ನರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net