

ಆಳಂದ: ಪಟ್ಟಣದ ಶ್ರೀರಾಮ ಮಾರ್ಕೆಟ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಇಂದಿರಾ ಕ್ಯಾಂಟೀನ್ ಬೇರೆಡೆ ಸ್ಥಳಾಂತರಿಸುವAತೆ ಒತ್ತಾಯಿಸಿ ಜೆಡಿಎಸ್‌ನ ಮಹೇಶ್ವರಿ ವಾಲಿ ನೇತೃತ್ವದಲ್ಲಿ ತರಕಾರಿ ವ್ಯಾಪಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ವ್ಯಾಪಾರಿಗಳ ಹಿತದೃಷ್ಟಿಯಿಂದ ಶ್ರೀರಾಮ ಮಾರ್ಕೆಟ್ ಬದಲು ಬೇರೆಡೆ ಇಂದಿರಾ ಕ್ಯಾಂಟೀನ್ ನಿರ್ಮಿಸಬೇಕು. ಜನರ ಬದುಕಿಗೆ ದಾರಿದೀಪವಾಗಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳ ಕೈಗೊಂಬೆಯAತೆ ನಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದು ವಾಲಿ ಕಿಡಿಕಾರಿದರು.
ಅಭಿವೃದ್ಧಿ ಹೆಸರಿನಲ್ಲಿ ಶಾಸಕರು ಅನುದಾನ ಲೂಟಿ ಹೊಡೆಯುತ್ತಿದ್ದರೆ, ಅಧಿಕಾರಿಗಳು ಗೂಂಡಾಗಳAತೆ ವರ್ತಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? 60-70 ವ್ಯಾಪಾರಿಗಳು ಕ್ಯಾಂಟೀನ್ ನಿರ್ಮಾಣದ ಬಳಿಕ ಬೀದಿಗೆ ಬರಲಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಕ್ಯಾಂಟೀನ್ ಕಾಮಗಾರಿ ಬೇರೆಡೆ ಸ್ಥಳಾಂತರಿಸಬೇಕು. ಇಲ್ಲವಾದರೆ ಎರಡ್ಮೂರು ದಿನ ನಂತರ ಪ್ರತಿಭಟನೆ ಜತೆಗೆ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ಗ್ರೇಡ್-2 ತಹಸೀಲ್ದಾರ್ ಭೀಮಣ್ಣಾ ಕುದುರಿ, ಡಿವೈಎಸ್‌ಪಿ ಗೋಪಿ ಆರ್., ಸಿಪಿಐ ಪ್ರಕಾಶ ಯಾತನೂರ ಮನವಿಪತ್ರ ಸ್ವೀಕರಿಸಿ, ತಮ್ಮ ಬೇಡಿಕೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರಮುಖರಾದ ಗುರುನಾಥ ಕಳಸೆ, ಸಮೀರ್ ಅನ್ಸಾರಿ, ಇಂದುಬಾಯಿ ಶೇರಖಾನೆ, ಸಾಗರ ಕಟಕೆ, ಸುಗಲಾಬಾಯಿ ದಿವಟೆ, ಗಂಗೂಬಾಯಿ ಶೇರಿಕರ, ಅಂಬಾಬಾಯಿ ಕಟಕೆ, ಜಯರಾಮ ರಾಠೋಡ್, ಶಿವಕುಮಾರ ಇಟಾಮಳೆ, ಕೃಷ್ಣಾ ಚವ್ಹಾಣ್ ಇತರರಿದ್ದರು.
ಪಿಎಸ್‌ಐಗಳಾದ ಭೀಮರಾವ ಬಂಕ್ಲಿ, ಸವಿತಾ ಮಾದನಹಿಪ್ಪರಗಾ, ಇಂದುಮತಿ ನಿಂಬರ್ಗಾ ಹಾಗೂ ಸಿಬ್ಬಂದಿ ಗಣಪತರಾವ ಘಂಟೆ, ಮಹಿಬೂಬ್ ಶೇಖ, ಸುಧೀರ, ಮಲ್ಲಿನಾಥ ಮುಲಗೆ ಇತರರು ಬಿಗಿ ಬಂದೋಬಸ್ತ್ ಮಾಡಿದ್ದರು.