ಇಂದಿರಾ ಕ್ಯಾಂಟೀನ್ ಪುನರಾರಂಭಿಸಿ

Atrocity
Published on

ಕಲಬುರಗಿ: ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಹಾಗೂ ಬಡ ಜನರ ಹೊಟ್ಟೆ ತಣ್ಣಾಗಿಸುವ ಇಂದಿರಾ ಕ್ಯಾಂಟೀನ್‌ಗಳನ್ನು ಒಂದು ವಾರದಲ್ಲಿ ಪುನರಾರಂಭಿಸಬೇಕು ಎಂದು ಜಿ¯್ಲÁಧಿಕಾರಿ ಬಿ.ಫೌಜಿಯಾ ತರನುಮ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿ¯್ಲÉಯ ಪೌರ ಸಂಸ್ಥೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಜಿ¯್ಲÉಯಲ್ಲಿ ಮೊದಲನೇ ಹಂತದಲ್ಲಿ ಆರಂಭವಾಗಿ ಸ್ಥಗಿತವಾದ ನಗರದಲ್ಲಿನ ಜಿಮ್ಸ್ ಆಸ್ಪತ್ರೆ, ಪಾಲಿಕೆ ಕಚೇರಿ, ಬಸ್, ರೈಲು ನಿಲ್ದಾಣ, ಎಪಿಎಂಸಿ ಕಚೇರಿ ಹೀಗೆ ಏಳು ಇಂದಿರಾ ಕ್ಯಾಂಟೀನ್‌ಗಳನ್ನು ವಾರದಲ್ಲಿ ಪುನರಾರಂಭಿಸಬೇಕು ಎಂದರು.
ಎರಡನೇ ಹಂತದಲ್ಲಿ ಕಲಬುರಗಿ ನಗರದ ಜಯದೇವ ಆಸ್ಪತ್ರೆ ಮತ್ತು ಕಣ್ಣಿ ಮಾರ್ಕೆಟ್, ಅಫಜಲಪುರ, ಆಳಂದ, ಶಹಾಬಾದ, ಯಡ್ರಾಮಿ, ಜೇವರ್ಗಿ, ವಾಡಿ ಹಾಗೂ ಸೇಡಂನಲ್ಲಿ ಪ್ರಾರಂಭಿಸಲಾಗುತ್ತಿದೆ. ಸೇಡಂ, ಅಫಜಲಪುರದಲ್ಲಿ ಕ್ಯಾಂಟೀನ್ ನಿರ್ಮಿಸಿದ್ದು, ಎಲೆಕ್ಟಿçಕಲ್, ಪ್ಲಂಬಿAಗ್ ಕೆಲಸ ಬಾಕಿ ಇದೆ. ಶೀಘ್ರ ಮುಗಿಸಬೇಕು. ಉಳಿದ ಕಡೆ ನಿವೇಶನ ನೋಡಿ ಕ್ಯಾಂಟೀನ್ ನಿರ್ಮಾಣದ ಎಕ್ಸಲ್ ಏಜೆನ್ಸಿಗೆ ಹಸ್ತಾಂತರಿಸಬೇಕು ಎಂದು ಹೇಳಿದರು.
ಜಿ¯್ಲÁ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನಾವರ ದೌಲಾ ಮಾತನಾಡಿ, ಮೊದಲನೇ ಹಂತದಲ್ಲಿ ಆರಂಭವಾದ ಒಂಬತ್ತು ಕ್ಯಾಂಟೀನ್ ಪೈಕಿ ಚಿತ್ತಾಪುರ ಮತ್ತು ಚಿಂಚೋಳಿ ಇಂದಿರಾ ಕ್ಯಾಂಟೀನ್ ಚಾಲ್ತಿಯಲ್ಲಿದ್ದು, ಬಡವರಿಗೆ ಅಲ್ಪ ರೂಪಾಯಿಯಲ್ಲಿಯೆ ಉಪಹಾರ, ಊಟ ಒದಗಿಸಲಾಗುತ್ತಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕ್ಲಯಾಣ ಇಲಾಖೆಯ ಉಪನಿರ್ದೇಶಕ ನವೀನ್ ಯು., ಮಹಾನಗರ ಪಾಲಿಕೆ ಇ.ಇ.ಶಿವಣಗೌಡ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net