ಇಂದಿರಾ ಕ್ಯಾಂಟೀನ್ ಊಟದಲ್ಲಿ ಇಲ್ಲ ವೈವಿಧ್ಯತೆ

CTD ---00002
Published on

ಚಿತ್ರದುರ್ಗ:ವಿದ್ಯಾರ್ಥಿಗಳು,ಬಡವರು ತಮ್ಮ ಹಸಿವು ನೀಗಿಸಿಕೊಳ್ಳಲು ಇಂದಿರಾ ಕ್ಯಾಂಟೀನ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಜ ನರಿಗೆ ಸಮತೋಲನ,ಪೌಷ್ಟಿಕಾಂಶವುಳ್ಳಂತಹ ಆಹಾರ ನೀಡಿ,ಅವರ ಆರೋಗ್ಯ ರಕ್ಷಣೆ ಮಾಡಬೇಕಾಗಿರುವ ಸರ್ಕಾರದ ಈ ನಿಟ್ಟಿನಲ್ಲಿ ವಿಫಲವಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ.ಎಚ್‌ಕೆ ಎಸ್ ಸ್ವಾಮಿಯವರು ದೂರಿದ್ದಾರೆ.

ಇಂದಿರಾ ಕ್ಯಾಂಟಿನ್‌ಗಳಲ್ಲಿ ಈಗ ಒಂದೇ ತರಹದ ತಿಂಡಿ ಅಥವಾ ಊಟ ಕೊಡಲಾಗುತ್ತಿದ್ದು, ವೈವಿಧ್ಯತೆ ಇರುವುದಿಲ್ಲ. ಕೇವಲ ಕಾರ್ಬೋ ಹೈಡ್ರೇ ಟ್ಸ್ ಇರುವಂತಹ ಆಹಾರ ಪದಾರ್ಥ ನೀಡುತ್ತಿ ರುವುದರಿಂದ ಗ್ರಾಹಕರ ಆರೋಗ್ಯದಲ್ಲಿ ಏರುಪೇರಾಗುವ ಸಂಭವಿದೆ. ಆದ್ದರಿಂದ ಸರ್ಕಾರ ಈ ಕ್ಯಾಂಟಿನ್‌ಗಳಲ್ಲಿ ಉತ್ತಮ ಗುಣಮಟ್ಟದ ಹಾಗೂ ವೈವಿಧ್ಯಮಯ ಪೂರೈಕೆಗೆ ಶೀಘ್ರ ಕ್ರಮ ವಹಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net