ಇಂದಿರಾ ಆಡಳಿತ ಬಡವರ ಪಾಲಿಗೆ ಸುವರ್ಣ ಯುಗ

19ctd ......
Published on

ಚಿತ್ರದುರ್ಗ: ದೇಶದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಆಡಳಿತಾವಧಿ ಸುವರ್ಣ ಯುಗವೆಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಸೀಬಾರದ ತಮ್ಮ ಕಚೇರಿಯಲ್ಲಿ ಮಂಗಳವಾರ ಇಂದಿರಾ ಗಾಂಧಿ ಜಯಂತಿ ಕಾರ‌್ಯಕ್ರಮದಲ್ಲಿ ಮಾತನಾಡಿ, ಜೀತ, ಕೂಲಿಗೆ ಬದುಕನ್ನೇ ಸಮರ್ಪಿಸಿಕೊಂಡಿದ್ದ ಭೂರಹಿತರನ್ನು ಭೂಮಿ ಒಡೆಯರನ್ನಾಗಿಸಿದ ಕೀರ್ತಿ ಇಂದಿರಾ ಗಾಂಧಿಗೆ ಸಲ್ಲುತ್ತದೆ ಎಂದರು.

ಭೂಮಿಯನ್ನು ಬಡ ಜನರಿಗೆ ಹಂಚುವ ಕ್ರಾಂತಿಕಾರಿ ನಿರ್ಧಾರ ಕೈಗೊಂಡು. ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮೂಲಕ ಸಾಮಾನ್ಯ ಜನರ ಆರ್ಥಿಕತೆಗೆ ನೆರವಾಗಿದ್ದಾರೆ. ಗರೀಬಿ ಹಟಾವೋ ಘೋಷಣೆ ಮೂಲಕ ಬಡತನ ನಿರ್ಮೂಲನೆಗೆ ಯೋಜನೆ ರೂಪಿಸಿದ ಇಂದಿರಾ ಗಾಂಧಿ, ಶ್ರೀಮಂತರು, ಭೂಮಾಲೀಕರು, ಬಂಡವಾಳಶಾಹಿ ದಬ್ಬಾಳಿಕೆಗೆ ಕಡಿವಾಣ ಹಾಕಿ, ಬಡಜನರನ್ನು ಆರ್ಥಿಕವಾಗಿ ಬಲಗೊಳಿಸಿದ್ದರು.

ತುರ್ತುಪರಿಸ್ಥಿತಿ ಘೋಷಣೆ ಬಡಜನರಿಗೆ ಅನುಕೂಲ ಕಲ್ಪಿಸಿದ,ಶ್ರೀಮಂತರ ದಬ್ಬಾಳಿಕೆಗೆ ಕಡಿವಾಣ ಹಾಕಿದ ಕಾಲ. ಆದರೆ ಇದನ್ನು ಸಹಿಸದ ಪಟ್ಟಭದ್ರರು ಅಪಪ್ರಚಾರ ನಡೆಸುತ್ತಿದ್ದಾರೆ. ಬಡಜನರ ಬದುಕಿನ ಭದ್ರತೆಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶ್ರಮಿಸುತ್ತಿದೆ ಎಂದರು. ಲಿಡ್ಕರ್ ಮಾಜಿ ಅಧ್ಯಕ್ಷ ಒ.ಶಂಕರ್, ತಾಪಂ ಮಾಜಿ ಸದಸ್ಯ ಸಮರ್ಥರಾಯ್, ಕೆಂಗುಂಟೆ ಜಯಪ್ಪ, ಚೇತನ್ ಬೋರೇನಹಳ್ಳಿ, ರಮೇಶ್,ಅನಿಲ್‌ಕೋಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net