

ಚಿತ್ರದುರ್ಗ:ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಿಂದ‘ನಿತ್ಯಕಲ್ಯಾಣ’ಶ್ರಾವಣಮಾಸದ ವಿಶೇಷ ಚಿಂತನಾ ಕಾರ‌್ಯಕ್ರಮವನ್ನು ಆ.17ರಿಂದ ಸೆಪ್ಟೆಂಬರ್15ರವರೆಗೆ ಚಿತ್ರದುರ್ಗ ಸಹಿತ ರಾಜ್ಯದ ವಿವಿಧೆಡೆ ಏರ್ಪಡಿಸಲಾಗಿದೆ. ಚಿತ್ರದುರ್ಗ,ದಾವಣಗೆರೆ,ಚನ್ನಗಿರಿ,ಮಾವಿನಹಳ್ಳಿ,ಬೆಂಗಳೂರು,ಮೈಸೂರು,ಕೊಡಗಿನ ಬೇಳೂರು ಮಠ,ವಿಜಯಮಹಾಂತೇಶ್ವರ ಮಠ,ಇಳಕಲ್ ಮತ್ತಿತರೆಡೆ ಕಾರ‌್ಯಕ್ರಮಗಳು ಜರುಗಲಿವೆ.
17ರಂದು ಬೆಳಗ್ಗೆ 11ಗಂಟೆಗೆ ಚಿತ್ರದುರ್ಗ ವಿದ್ಯಾನಗರದ ಶಾಸಕರ ಕಚೇರಿಯಲ್ಲಿ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ. ಮು ರುಘಾ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಶ್ರೀ ಛಲವಾದಿ ಗುರುಪೀಠದ ಶ್ರೀ ಬಸವನಾಗೀದೇವ ಸ್ವಾಮೀಜಿ ಸ ಮ್ಮುಖ ವಹಿಸುವರು. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಆಗಮಿಸಲಿದ್ದು,‘ಪರಮಾರ್ಥದೃಷ್ಟಿ’ಕುರಿತು ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಮಾತ ನಾಡುವರೆಂದು ಮುರುಘಾ ಮಠದ ಪ್ರಕಟಣೆ ತಿಳಿಸಿದೆ.