ನಾಳೆಯಿಂದ ಹೊರಗುತ್ತಿಗೆ ನೌಕರರು ಸೇವೆಗೆ ಹಾಜರು

1 smg 7
Published on

ಶಿವಮೊಗ್ಗ: ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಮೆಗ್ಗಾನ್ ಆಸ್ಪತ್ರೆ ಹೊರಗುತ್ತಿಗೆ ನೌಕರರು ಗುರುವಾರ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದು ಶುಕ್ರವಾರದಿಂದಲೇ ಸೇವೆಗೆ ಹಾಜರಾಗಲಿದ್ದಾರೆ.

ಬುಧವಾರ ಸಿಮ್್ಸ ಎದುರು ಧರಣಿನಿರತ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಪ್ರತಿಭಟನಾಕಾರರಿಗೆ ಕಿವಿಮಾತು ಹೇಳಿ ಪ್ರತಿಭಟನೆ ಕೈ ಬಿಡಲು ಒಂದು ದಿನದ ಗಡುವು ನೀಡಿದ್ದರು. ಸಚಿವರು ಎಚ್ಚರಿಕೆ ಬಳಿಕ ಎಚ್ಚೆತ್ತುಕೊಂಡ ನೌಕರರು ಗುರುವಾರ ಧರಣಿ ಕೈಬಿಟ್ಟಿರುವುದಾಗಿ ಸ್ಪಷ್ಟಪಡಿಸಿದ್ದು, ಸಚಿವರು ಮತ್ತ ಡಿಸಿ ಕೆ.ಬಿ.ಶಿವಕುಮಾರ್ ಸೂಚನೆ ಮೇರೆಗೆ ಕರ್ತವ್ಯಕ್ಕೆ ಮರಳುವುದಾಗಿ ತಿಳಿಸಿದರು.

183 ಸ್ವಚ್ಛತಾ ಸಿಬ್ಬಂದಿ, 130 ಭದ್ರತಾ ಸಿಬ್ಬಂದಿ, 93 ನರ್ಸ್​ಗಳು, 78 ಲ್ಯಾಬ್ ಅಟೆಂಡರ್, 8 ಫಾರ್ಮಸಿಸ್ಟ್​ಗಳು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇದಕ್ಕೆ ಕೆಲ ಸಂಘಟನೆಗಳು ಬೆಂಬಲ ಕೊಟ್ಟಿದ್ದವು. ಕೆಲಸ ಕಳೆದುಕೊಳ್ಳುವ ಭೀತಿ ಎದುರಾದಾಗ ಪ್ರತಿಭಟನೆ ಕೈ ಬಿಟ್ಟು ಕೆಲಸಕ್ಕೆ ಹಾಜರಾಗುವ ತೀರ್ಮಾನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net