ಇಂದಿನಿಂದ ಸದಾಶಿವ ಯಾತ್ರಾ ಮಹೋತ್ಸವ

1648789237025
Published on

ವಿಜಯಪುರ: ಕರೋನಾ ಆತಂಕ ಇಲ್ಲದ್ದರಿಂದ ಈ ಬಾರಿ ಶ್ರೀ ಗುರು ಚಕ್ರವರ್ತಿ ಸದಾಶಿವ ಯಾತ್ರಾ ಮಹೋತ್ಸವದ ಜಾತ್ರೆ ಇದೀಗ ನಡೆಯಲಿದೆ. ಇಂದಿನಿಂದ ಐದು ದಿನಗಳ ಕಾಲ ವಿಜಯಪುರ ತಾಲೂಕಿನ ಸುಕ್ಷೇತ್ರ ಕತ್ನಳ್ಳಿಯಲ್ಲಿ ಸದಾಶಿವ ಮುತ್ಯಾನ ಜಾತ್ರೆ ನಡೆಯಲಿದೆ. ಏಪ್ರೀಲ್ 1ರಿಂದ 5ರ ವರೆಗೆ ಜಾತ್ರೆ ನಡೆಯಲಿದೆ, ಇಂದಿನಿಂದ ಜಾನುವಾರು ಜಾತ್ರೆ, ಇನ್ನೂರು ಮಳಿಗೆಗಳ ಬೃಹತ್ ಕೃಷಿ ಮೇಳ ನಡೆಯಲಿದೆ. ಇಂದು ಸಂಜೆ ಕೆಸರುಗದ್ದೆ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ. ೨ರಂದು ಯುಗಾದಿ ದಿನ ಕುಂಭಮೇಳ, ಪೂಜೆ ನಡೆಯಲಿದೆ. ೩ರಂದು ರಥೋತ್ಸವ, ರಸಪ್ರಶ್ನೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ೪ರಂದು ಪಂಥಿ, ಪ್ರಸಾದ, 35ಕ್ಕೂ ಅಧಿಕ ಸರಳ ಸಾಮೂಹಿಕ ವಿವಾಹಗಳು ನಡೆಯಲಿವೆ. ೫ರಂದು ಕುಸ್ತಿ ಭಾರ ಎತ್ತುವ ಸ್ಪರ್ಧೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಭಾರ ಎತ್ತುವುದು, ಆರು ಎತ್ತಿನ ನೇಗಿಲು ಎಳೆಯುವ ಸ್ಪರ್ಧೆ, ರೈತರ ಚಟುವಟಿಕೆಗಳು ನಡೆಯಲಿವೆ. ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಎರಡು ದಿನಗಳ ಕಾಲ ನಡೆಸಲಾಗುವುದು ಎಂದು ಮಠದ ಪೀಠಾಧಿಪತಿ ಶಿವಯ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಉಪಸ್ಥಿತರಿದ್ದರು. ಮಹಾರಾಷ್ಟ್ರ, ಆಂದ್ರ ಸೇರಿದಂತೆ ರಾಜ್ಯದ ಮೂಲೆಮೂಲೆಯಿಂದ ಭಕ್ತರು ಆಗಮಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net