

ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಸಿದ್ದಾಪುರದಲ್ಲಿ ಶ್ರೀ ಭದ್ರಕಾಳಮ್ಮ ಸಮೇತ ಶ್ರೀ ವೀರಭದ್ರಸ್ವಾಮಿ ದೇವಾಲಯದ ನೂತನ ಉತ್ಸವಮೂರ್ತಿ ಪ್ರಾಣಪ್ರತಿಷ್ಠಾಪನೆ, ಲೋಕಾರ್ಪಣೆ ಸಮಾರಂಭ ಮೇ 13 ರಿಂದ ಎರಡು ದಿನಗಳ ಕಾಲ ನಡೆಯಲಿದೆ ಎಂದು ಶ್ರೀ ವೀರಭದ್ರೇಶ್ವರ ಭಕ್ತ ಮಂಡಳಿ ತಿಳಿಸಿದೆ.
13ರಂದು ರಾತ್ರಿ 7ಕ್ಕೆ ಗಂಗಾಪೂಜೆ, ಗೋಪೂಜೆ, ದೀಪ ಪೂಜೆ, ಗಣಪತಿ ಸ್ವಸ್ತಿ ಪುಣ್ಯಾಹ ವಾಚನ ಹಾಗೂ ವಿಗ್ರಹ ಸಂಸ್ಕಾರ ಪೂಜಾ ವಿಧಿಗಳು ನೆರವೇರಲಿವೆ. 14 ರಂದು ಬೆಳಗ್ಗೆ 6ಕ್ಕೆ ಕಲಶ ಸ್ಥಾಪನೆ, ಉತ್ಸವಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ, ರುದ್ರಾಭಿಷೇಕ, ಗಣಹೋಮ ಪೂರ್ಣಾಹುತಿ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗವಿರುತ್ತದೆ.
ಅಂದು ಬೆಳಗ್ಗೆ 11ಕ್ಕೆ ನಡೆಯುವ ಧಾರ್ಮಿಕ ಸಮಾರಂಭದ ಸಾನ್ನಿಧ್ಯವನ್ನು ಎಡೆಯೂರು ಕ್ಷೇತ್ರದ ಬಾಳೆಹೊನ್ನೂರು ಮಠದ ಶಿಲಾಮಠ ತಾವರೆಕೆರೆ, ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಗೌರವಾಧ್ಯಕ್ಷರಾದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪ್ರಕಟಣೆ ಕೋರಿದೆ.