ಇಂದಿನಿಂದ ರಾಯರ ಆರಾಧನೆ ಆರಂಭ

Rayaru
Published on

ಚಿತ್ರದುರ್ಗ: ರಾಘವೇಂದ್ರ ಸ್ವಾಮಿಯ 352ನೇ ಆರಾಧನಾ ಮಹೋತ್ಸವದ ಅಂಗವಾಗಿ ಬುಧವಾರ ರಾಯರ ಮಠದಲ್ಲಿ ವಿಶೇಷ ಪೂಜೆಗಳು ಜರುಗಿದವು.

ಬೆಳಗ್ಗೆ 6.30ಕ್ಕೆ ಯಜುರ್ವೇದ ನಿತ್ಯ, ನೂತನ ಉಪಾಕರ್ಮ, ಸಂಜೆ 6.30ರಿಂದ ಪಂಚರಾತ್ರೋತ್ಸವದ ಅಂಗವಾಗಿ ಧ್ವಜಾರೋಹಣ, ಗೋಪೂಜೆ, ಧನ-ಧಾನ್ಯ ಪೂಜೆ, ಲಕ್ಷ್ಮೀ ಪೂಜೆ, ಸ್ವಸ್ತಿ ವಾಚನ, ಮಹಾಮಂಗಳಾರತಿ ಸೇರಿ ವಿವಿಧ ಪೂಜೆಗಳು ನೆರವೇರಿದವು.

ಆ. 31ರಂದು ಗುರುಸೌರ್ವಭೌಮರ ಪೂರ್ವಾರಾಧನೆ, ಸೆ. 1ರಂದು ಮಧ್ಯಾರಾಧನೆ, 2ರಂದು ಉತ್ತರಾರಾಧನೆ, ನಗರದ ರಾಜಬೀದಿಗಳಲ್ಲಿ ಮಹಾರಥೋತ್ಸವ, 3ರಂದು ಸುಜ್ಞಾನೇಂದ್ರ ತೀರ್ಥರ ಆರಾಧನೆ, ಪವಮಾನ ಹೋಮ, ಸರ್ವಸಮರ್ಪಣೋತ್ಸವ ಪೂಜಾ ಕೈಂಕರ್ಯ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net