1ರಿಂದ ಪ್ರತಿಭಟನೆ

cropinsurance1-1687758372
Published on

ಚಿತ್ರದುರ್ಗ:ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ವಿತರಣೆ ವಿಳಂಬವನ್ನು ಖಂಡಿಸಿ ಏಪ್ರಿಲ್ 1ರಿಂದ ಡಿಸಿ ಕಚೇರಿ ಬಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ರಾಜ್ಯರೈತ ಸಂಘ ಹೇಳಿದೆ.2023-2024ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಮತ್ತು ಬೆಳೆ ಪರಿಹಾರವನ್ನು ಈವರೆಗೆ ವಿತರಿಸಿಲ್ಲ.
ಡಿಸಿ ಟಿ.ವೆಂಕಟೇಶ್ ಅವರ ಅಧ್ಯಕ್ಷತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈಚೆಗೆ ನಡೆದ ಅಧಿಕಾರಿಗಳ ಸಭೆ ಯಲ್ಲಿ ಫೆಬ್ರವರಿ 29 ಹಾಗೂ ನಂತ ರದಲ್ಲಿ ಮಾರ್ಚ್26ರೊಳಗೆ ವಿತರಿಸುವ ಭರವಸೆ ಕೊಡಲಾಗಿತ್ತು. ಆದರೆ ಪರಿಹಾರ ಈವರೆಗೂ ದೊರಕಿಲ್ಲ. ಆದ್ದರಿಂದ ಪರಿಹಾರ ವಿತರಣೆ ಆಗುವವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net