ಇಂದಿನಿಂದ ಗಣಿಗಳ ಗಡಿ ಸರ್ವೆ ಪ್ರಾರಂಭ

28 yerriswamy 04
Published on

ಬಳ್ಳಾರಿ : ಆಂಧ್ರ ಮತ್ತು ಕರ್ನಾಟಕ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಸಂಡೂರು ತಾಲೂಕಿನ ತುಮಟಿ ಪ್ರದೇಶ ಹಾಗೂ ರಾಯದುರ್ಗಂ ತಾಲೂಕಿನ ಓಬಳಾಪುರಂ, ಮಲಪನಗುಡಿ ಪ್ರದೇಶದ ಏಳು ಗಣಿಗಳ ಗಡಿ ಗುರುತಿಸುವ ಜಂಟಿ ಸರ್ವೆ ಕಾರ್ಯ ಬುಧವಾರದಿಂದ ಆರಂಭಗೊಳ್ಳಲಿದೆ. ಮೇ 29 ರಂದು ಮೆಹಬೂಬ್ ಟ್ರಾನ್ಸ್‌ಪೋರ್ಟ್ ಕಂಪನಿ, 30 ರಂದು ಹಿಂದ್ ಟ್ರೇಡರ್ಸ್, 31 ರಂದು ಎನ್. ರತ್ನಯ್ಯ, ಜೂ. 1 ರಂದು ಟಿ. ನಾರಾಯಣ ರೆಡ್ಡಿ, ಜೂ 2 ರಿಂದ 4 ರವರೆಗೆ ವಿಭೂತಿಗುಡ್ಡ ಮೈನ್ಸ್ ಪ್ರೈ.ಲಿ., 5 ರಂದು ಸುಗ್ಗುಲ್ಲಮ್ಮ ಗುಡ್ಡ ಮೈನಿಂಗ್ ಆ್ಯಂಡ್ ಕಂಪನಿ, 6 ರಂದು ಬಳ್ಳಾರಿ ಮೈನಿಂಗ್ ಕಾರ್ಪೋರೇಷನ್‌ಗಳ ಗಣಿ ಸರ್ವೆ ನಡೆಯಲಿದೆ. ಜೂನ್ ಎಂಟರವರೆಗೆ ನಡೆಯುವ ಸರ್ವೆ ಕಾರ್ಯಕ್ಕೆ ಸಂಬಂಧಿಸಿ ಗಣಿ ಮಾಲೀಕರಿಗೆ ಬಳ್ಳಾರಿ ಜಿಲ್ಲಾ ಹಿರಿಯ ಭೂ ವಿಜ್ಞಾನಿ ಪತ್ರ ಬರೆದಿದ್ದಾರೆ. ಕೇಂದ್ರದ ಉನ್ನತಾಧಿಕಾರ ಸಮಿತಿಯ (ಸಿಇಸಿ) ಸದಸ್ಯರ ಅಧ್ಯಕ್ಷತೆಯಲ್ಲಿ ಮೆ 21 ರಂದು ಸಭೆ ನಡೆದಿದೆ. ಏಳು ಗಣಿಗಳ ಜಂಟಿ ಸರ್ವೆ ನಡೆಸಲು ಆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸರ್ವೆಯನ್ನು ಸುರತ್ಕಲ್‌ನ ಎನ್‌ಐಟಿಕೆ, ಅರಣ್ಯ, ಕಂದಾಯ, ಭೂ ದಾಖಲೆಗಳು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ , ಕರ್ನಾಟಕ ಮತು ಆಂಧ್ರಪ್ರದೇಶ ಸರ್ಕಾರಗಳ ತಾಂತ್ರಿಕ ತಂಡದ ಮೂಲಕ ನಡೆಸಲು ನಿರ್ಧರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net